ಐದು ರೂಪಾಯಿಗೆ ಮುದ್ದೆ ಬಸ್ಸಾರು ಊಟ ನೀಡುವ ಅಪ್ಪಾಜಿ ಕ್ಯಾಂಟೀನ್ ನಲ್ಲಿ ಇನ್ನು ಮುಂದೆ ಜೋಳದ ರೊಟ್ಟಿ ಎಣ್ಣೆಗಾಯಿ ಪಲ್ಯ ಸಿಗಲಿದೆ.
ಉತ್ತರ ಕರ್ನಾಟಕವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ನಿರ್ಲಕ್ಷ್ಯಿಸುತ್ತಿದ್ದಾರೆ ಅನ್ನುವ ಆರೋಪವನ್ನು ತೊಡೆದು ಹಾಕುವ ಸಲುವಾಗಿಯೇ ಅಪ್ಪಾಜಿ ಕ್ಯಾಂಟೀನ್ ಮಾಲೀಕ ಜೆಡಿಎಸ್ ಹಾಗೂ ವಿಧಾನಪರಿಷತ್ ಸದಸ್ಯ ಟಿ.ಎ ಶರವಣ, ಉತ್ತರ ಕರ್ನಾಟಕದ ಊಟವನ್ನು ಪರಿಚಯಿಸಲು ಈ ನಿರ್ಧರಿಸಿದ್ದಾರೆ. ಈ ಮೂಲಕ ಕರ್ನಾಟಕದ ಏಕತೆಯನ್ನು ತೋರಿಸುವ ಸಾಹಸಕ್ಕೆ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ.
ರಾಜ್ಯದ ಎಲ್ಲಾ ಭಾಗದ ಜನರ ತ್ಯಾಗದ ಪರಿಣಾಮವಾಗಿ ಅಖಂಡ ಕರ್ನಾಟಕ ನಿರ್ಮಾಣವಾಗಿದೆ,ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದಾಗಿ ರಾಜಕೀಯ ಹೆಸರಿನಲ್ಲಿ ರಾಜ್ಯವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ, ಅಪ್ಪಾಜಿ ಕ್ಯಾಂಟೀನ್ ಮೂಲಕ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಊಟವನ್ನು ಒಂದೇ ಸ್ಥಳದಲ್ಲಿ ನೀಡುತ್ತೇವೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮೂರೇ ಮೂರು ಪ್ರಶ್ನೆಗೆ ಉತ್ತರಿಸಿ ದೇವೇಗೌಡರೇ…
ಪ್ರಸ್ತುತ ಪ್ರತಿದಿನ ಸುಮಾರು 650 ರಾಗಿ ಮುದ್ದೆ ಅಪ್ಪಾಜಿ ಕ್ಯಾಂಟಿನ್ ನಲ್ಲಿ ತಯಾರಾಗುತ್ತಿದೆ. ಮಂಡ್ಯ ಮೂಲದ ಅಡುಗೆಯವರು ಇದನ್ನು ಮಾಡುತ್ತಾರೆ. ಈಗ ಜೋಳದ ರೊಟ್ಟಿ ತಯಾರಿಸಲು ಉತ್ತರ ಕರ್ನಾಟಕ ಅಡುಗೆಯವರನ್ನು ಕರೆ ತರಲಾಗಿದೆ.
ಅಕ್ರಮ ಸಂಬಂಧ ಬಯಲಾದ ಭೀತಿ – ಗಂಡನ ಮರ್ಮಾಂಗವನ್ನು ಕಚ್ಚಿದ ಪತ್ನಿ
ಇದನ್ನು ಪ್ರಚಾರ ಪಡಿಸುವ ಸಲುವಾಗಿಯೇ ಶನಿವಾರ ವಿಶೇಷ ಸ್ಪರ್ಧೆ ಆಯೋಜಿಸಲಾಗಿದೆ. 10 ನಿಮಿಷದಲ್ಲಿ ಯಾರು ಹೆಚ್ಚು ಜೋಳದ ರೊಟ್ಟಿ ಹಾಗೂ ಮುದ್ದೆ ತಿನ್ನುತ್ತಾರೋ ಅವರಿಗೆ ಒಂದು ತಿಂಗಳು ಪೂರ್ತಿ ಅಪ್ಪಾಜಿ ಕ್ಯಾಂಟೀನ್ ನಲ್ಲಿ ಉಚಿತ ಊಟ ಸಿಗಲಿದೆ.
ಶರವಣ ಪ್ಲಾನ್ ಬಗ್ಗೆ ನಾವೇನು ಹೇಳುವುದಿಲ್ಲ. ಓದುಗರಾದ ನೀವೇ ಕಮೆಂಟ್ ಮಾಡಬೇಕು.
[…] […]