ಈ ನಡುವೆ ಜೊತೆ ಜೊತೆಯಲ್ ಧಾರಾವಾಹಿ ಒಂದು ಹಂತಕ್ಕೆ ಬಂದು ತಲುಪಿದ್ದುಸ ವೀಕ್ಷಕರ ನಿರೀಕ್ಷೆಯಂತೆ ಅನು ಆರ್ಯವರ್ಧನ್ ವಿವಾಹ ಮಹೋತ್ಸವ ಘಳಿಕೆ ಕೂಡಿ ಬಂದಿದೆ. ಈ ಸಂಭ್ರಮವನ್ನು ಅದ್ಧೂರಿಯಲ್ಲಿ ಆರೂರು ಜಗದೀಶ್ ಚಿತ್ರೀಕರಿಸಿದ್ದು, ಈ ಎಪಿಸೋಡ್ ಗಾಗಿಯೇ ವಾಹಿನಿ ಕೂಡಾ ದೊಡ್ಡ ಮೊತ್ತದ ಬಂಡವಾಳ ಹೂಡಿಕೆ ಮಾಡಿದೆಯಂತೆ.
ಮದುವೆ ಸಲುವಾಗಿ ಸ್ಪೆಷಲ್ ಸೆಟ್ ಗಳನ್ನು ಹಾಕಲಾಗಿತ್ತು, ದುಬಾರಿ ಕಾರುಗಳನ್ನು ತರಿಸಲಾಗಿದ್ದು, ವಧು ವರ ಸೇರಿದಂತೆ ಅತಿಥಿಗಳ ಕಲರ್ ಫುಲ್ ಡ್ರೆಸ್ ಗಾಗಿ ಸಿಕ್ಕಾಪಟ್ಟೆ ಖರ್ಚು ಮಾಡಲಾಗಿದೆ. ಇjನ್ನು ಈ ಮದುವೆಯನ್ನು ಅದ್ಯಾವ ಸಿನಿಮಾಗೂ ಕಡಿಮೆ ಇಲ್ಲದಂತೆ ಚಿತ್ರೀಕರಿಸಲಾಗಿದ್ದು ವಿಶೇಷ ಕ್ಯಾಮಾರಗಳ ಮೂಲಕ ಮದುವೆಯನ್ನು ಸೆರೆ ಹಿಡಿಯಲಾಗಿದೆ.
Discussion about this post