ಬೆಂಗಳೂರು : ಮೂತ್ರ ಮಾಡುವ ವಿಚಾರದಲ್ಲಿ ಪ್ರಾರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನಲ್ಲಿ ಉಲ್ಲಾಳದಲ್ಲಿ ನಡೆದಿದೆ.
ಉಲ್ಲಾಳ ಉಪನಗರ ನಿವಾಸಿ ಅರುಣ್ ಕುಮಾರ್ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಅರುಣ್ ಕುಮಾರ್ ಚಿಕ್ಕಬಳ್ಳಾಪುರ ಶಿಡ್ಲಘಟ್ಟ ನಿವಾಸಿಯಾಗಿದ್ದು ಹಲವು ವರ್ಷಗಳಿಂದ ಬೆಂಗಳೂರಿನ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದ.
ಮಂಗಳವಾರ ಸಂಜೆ ಉಲ್ಳಾಳ ಉಪನಗರದ ರಸ್ತೆ ಬದಿ ಅರುಣ್ ಕುಮಾರ್ ಮೂತ್ರ ವಿಸರ್ಜನೆ ಮಾಡುತ್ತಿದ್ದ.
ಈ ವೇಳೆ ಅರುಣ್ ಗೆ ಪರಿಚಿತನೇ ಆಗಿರುವ ರೌಡಿ ಶೀಟರ್ ಕೃಷ್ಣನ ಸಹಚರರು. ಮಹಿಳೆಯರೆಲ್ಲಾ ಓಡಾಡುತ್ತಾರೆ, ರಸ್ತೆಯಲ್ಲಿ ಮೂತ್ರ ಮಾಡ್ತೀಯಾ ಎಂದು ಗದರಿದ್ದಾರೆ.
ಈ ವೇಳೆ ಅರುಣ್ ಮತ್ತು ಕೃಷ್ಣ ಗ್ಯಾಂಗ್ ನಡುವೆ ಗಲಾಟೆ ನಡೆದಿದೆ. ಅರುಣ್ ಮೇಲೆ ಹಲ್ಲೆಯೂ ಆಗಿದೆ.
ಬಳಿಕ ಅರುಣ್ ಕರೆ ಮಾಡಿ ತನ್ನ ಸ್ನೇಹಿತರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಈ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.
ಘಟನೆಯಲ್ಲಿ ಗಾಯಗೊಂಡಿದ್ದ ಅರುಣ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಜೊತೆಗೆ ರೌಡಿ ಶೀಟರ್ ಕೃಷ್ಣ ಸೇರಿದಂತೆ ಎರಡು ಗುಂಪುಗಳ ಸದಸ್ಯರಿಗೂ ಗಾಯಗಳಾಗಿದೆ. ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
Discussion about this post