ಈ ವರ್ಷದ ಕೊನೆಯಲ್ಲಿ ಮೊದಲ ಮಾನವರಹಿತ ನೌಕೆಯ ಕಾರ್ಯಾಚರಣೆ
ಗಗನ ಯಾನ್ ಕಾರ್ಯಕ್ರಮದಡಿಯಲ್ಲಿ ಇಸ್ರೋ ಮೊದಲ ಮಾನವರಹಿತ ಪರಿಕ್ಷಾರ್ಥ ನೌಕಾ ಉಡ್ಡಯನ ಮಿಷನ್ಗೆ ಸಿದ್ಧವಾಗುತ್ತಿದೆ ಎಂದು ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಡಾ ಎಸ್ ಉನ್ನಿಕೃಷ್ಣನ್ ನಾಯರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ನಡೆದ ಎಂಟನೇ ಬಾಹ್ಯಾಕಾಶ ಎಕ್ಸ್ಪೋದ ಉದ್ಘಾಟನೆ ನಂತರ ಮಾತನಾಡಿದ ಅವರು, ಮಾನವ ರಹಿತ ನೌಕಾ ಮಿಷನ್ಗಾಗಿ ಆರ್ಬಿಟಲ್ ಮಾಡ್ಯೂಲ್ ಸಿದ್ಧವಾಗುತ್ತಿದ್ದು, ಶೀಘ್ರದಲ್ಲೇ ಶ್ರೀಹರಿಕೋಟಾಕ್ಕೆ ಸ್ಥಳಾಂತರಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ವರ್ಷದ ಕೊನೆಯಲ್ಲಿ ಮೊದಲ ಮಾನವರಹಿತ ನೌಕೆಯ ಕಾರ್ಯಾಚರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಇತ್ತೀಚೆಗೆ ಚಿತ್ರದುರ್ಗದಲ್ಲಿ ಪುಷ್ಪಕ್ ಮರುಬಳಕೆ ಉಡಾವಣಾ ವಾಹನ ಖಐಗಿ ಐಇಘಿ ೦೨ ಅನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿತ್ತು. ಈ ಮೈಲಿಗಲ್ಲಿನ ನಂತರ, ಮರುಬಳಕೆ ಬಾಹ್ಯಾಕಾಶ ವಾಹನದ ಪ್ಯಾರಾಚೂಟ್ ವ್ಯವಸ್ಥೆಯನ್ನು ಪರೀಕ್ಷಿಸಲು ISRO ಸಿದ್ಧವಾಗುತ್ತಿದೆ ಎಂದು ಹೇಳಿದರು.
ಗಗನ ಯಾನ್ ಕಾರ್ಯಕ್ರಮದಡಿಯಲ್ಲಿ ಇಸ್ರೋ ಮಾನವಸಹಿತ ಬಾಹ್ಯಾಕಾಶ ಮಿಷನ್ಗೆ ಮೊದಲು ಮೂರು ಮಾನವರಹಿತ ಪರೀಕ್ಷಾ ಹಾರಾಟಗಳನ್ನು ನಡೆಸಲಿದೆ.
ಇದೇ ಸಂದರ್ಭದಲ್ಲಿ ಇಸ್ರೋ ಬಾಹ್ಯಾಕಾಶ ನಿಲ್ದಾಣವನ್ನು ೨೦೩೫ ರ ವೇಳೆಗೆ ಕಾರ್ಯಗತಗೊಳಿಸಲು ಯೋಜಿಸುತ್ತಿದೆ ಎಂದು ತಿಳಿಸಿದ ಡಾ.ಉನ್ನಿಕೃಷ್ಣನ್ ತಿಳಿಸಿದರು.
ಚಂದ್ರಯಾನ-೪ ಚಂದ್ರನ ಮೇಲೆ ಇಳಿದು ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ಹಿಂತಿರುಗುವ ಸಾಮರ್ಥ್ಯವನ್ನು ಹೊಂದುವ ಉಡ್ಡಯನ ನೌಕೆಯನ್ನು ಸಿದ್ದಪಡಿಸಲಿದೆ ಎಂದು ಡಾ ಉನ್ನಿಕೃಷ್ಣನ್ ಹೇಳಿದರು.
The Director of Vikram Sarabhai Space Centre, Dr. S Unnikrishnan Nair, has informed us that ISRO is getting ready for the first unmanned mission under the Gaganyaan programme. Speaking on the sidelines of the eighth Bengaluru Space Expo in Bengaluru today, he informed media persons that the orbital module for the unmanned mission is getting ready and will soon be shifted to Sriharikota.