ನವದೆಹಲಿ : ವೃದ್ಧರಲ್ಲಿ ರೋಗ ನಿರೋಧಕ ಶಕ್ತಿ ಕುಂದುತ್ತಿರುವ ಹಿನ್ನಲೆಯಲ್ಲಿ ಬೂಸ್ಟರ್ ಡೋಸ್ ನೀಡಲು ಇಸ್ರೇಲ್ ನಿರ್ಧರಿಸಿದೆ. ಹೀಗಾಗಿ ಈಗಾಗಲೇ ಎರಡು ಡೋಸ್ ಪಡೆದು ನಿಗದಿತ ಸಮಯವಾದವರು ಮೂರನೇ ಡೋಸ್ ಲಸಿಕೆ ಪಡೆಯುವಂತೆ ಸೂಚಿಸಲಾಗಿದೆ.
ಈ ಮೂಲಕ ಮೂರನೇ ಡೋಸ್ ಲಸಿಕೆ ನೀಡುತ್ತಿರುವ ಮೊದಲ ದೇಶ ಅನ್ನುವ ಹೆಗ್ಗಳಿಕೆಗೆ ಇಸ್ರೇಲ್ ಪಾತ್ರವಾಗಿದ್ದು, 60 ವರ್ಷ ಮೇಲ್ಪಟ್ಟ ನಾಗರಿಕರಿಗೆ 3ನೇ ಡೋಸ್ ಲಸಿಕೆ ಅಭಿಯಾನ ಪ್ರಾರಂಭಿಸಲಾಗಿದೆ. ಈ ಮೂಲಕ ಬರಬಹುದಾದ ಹೊಸ ಅಲೆಯನ್ನು ತಡೆಯಲು ಮುಂದಾಗಿದೆ. ಈ ಸಲುವಾಗಿ ಫೈಜರ್ ಲಸಿಕೆಯ ಮೂರನೇ ಡೋಸ್ ಅನ್ನು ಹಿರಿಯ ನಾಗರಿಕರಿಗೆ ನೀಡಲಾಗುತ್ತಿದೆ.

ಈಗಾಗಲೇ ಇಸ್ರೇಲ್ ನಲ್ಲಿ ಡೆಲ್ಟಾ ಹಾವಳಿ ಶುರುವಾಗಿದ್ದು, ಎರಡು ಡೋಸ್ ಪಡೆದ ಹಿರಿಯ ನಾಗರಿಕರಲ್ಲಿ ಕೊರೋನಾ ವಿರುದ್ಧದ ಪ್ರತಿಕಾಯ ಸಾಮರ್ಥ್ಯ ಕಡಿಮೆಯಾಗುತ್ತಿದೆ ಹೀಗಾಗಿ ಬೂಸ್ಟರ್ ಡೋಸ್ ನೀಡಲಾಗುತ್ತಿದೆ ಎಂದು ಇಸ್ರೇಲ್ ಪ್ರಧಾನಿ ಬೆನ್ನಟ್ ಹೇಳಿದ್ದಾರೆ.
Discussion about this post