Monday, April 19, 2021

ಇನ್ಪೋಸಿಸ್, ಆಕ್ಸೆಂಚರ್ ಸಿಬ್ಬಂದಿಗೆ ಉಚಿತ ಕೊರೋನಾ ಲಸಿಕೆ ಭಾಗ್ಯ

Must read

- Advertisement -
- Advertisement -

ಬೆಂಗಳೂರು : ಕೊರೋನಾ ವಿರುದ್ಧದ ಸಮರದ ಅಂಗವಾಗಿ ಕೊರೋನಾ ನಿಯಂತ್ರಣ ಲಸಿಕೆ ವಿತರಣೆ ಕಾರ್ಯಕ್ಕೆ ಇದೀಗ ವೇಗ ನೀಡಲಾಗಿದೆ.

ಎರಡನೇ ಹಂತದ ಲಸಿಕಾ ವಿತರಣಾ ಕಾರ್ಯ ಜಾರಿಯಲ್ಲಿದ್ದು, ಶೀಘ್ರದಲ್ಲೇ ಪ್ರತಿಯೊಬ್ಬರಿಗೂ ಲಸಿಕೆ ತಲುಪಬೇಕು ಅನ್ನುವುದು ಸರ್ಕಾರದ ನಿರ್ಧಾರ.

ಈ ನಡುವೆ ದೇಶಾದ್ಯಂತ ತಮ್ಮ ಕಂಪನಿ ಸಿಬ್ಬಂದಿಗೆ ಉಚಿತ ಲಸಿಕೆ ನೀಡುವ ನಿರ್ಧಾರವನ್ನು ಇನ್ಪೋಸಿಸ್, ಆಕ್ಸೆಂಚರ್ ಪ್ರಕಟಿಸಿದೆ.

ಮಾಹಿತಿ ತಂತ್ರಜ್ಞಾನ ಲೋಕದ ದಿಗ್ಗಜ ಸಂಸ್ಥೆಗಳ ಈ ನಿರ್ಧಾರದ ಬೆನ್ನಲ್ಲೇ ಮತ್ತಷ್ಟು ಐಟಿ ಕಂಪನಿಗಳು ತಮ್ಮ ನೌಕರರಿಗೆ ಉಚಿತ ಲಸಿಕೆ ಘೋಷಿಸುವ ಸಾಧ್ಯತೆಗಳಿದೆ.

ಪ್ರಸ್ತುತ 60 ವರ್ಷ ಮೇಲ್ಪಟ್ಟವರಿಗೆ ಹಾಗೂ ವಿವಿಧ ಆರೋಗ್ಯ ಸಮಸ್ಯೆ ಇರೋ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ.

ಹೀಗಾಗಿ ಈ ವರ್ಗದಲ್ಲಿ ಬರೋ ಸಿಬ್ಬಂದಿಗೆ ಲಸಿಕೆ ನೀಡಿ, ಬಳಿಕ ಎಲ್ಲರಿಗೂ ಲಸಿಕೆ ಘೋಷಣೆಯಾದ ಸಂದರ್ಭದಲ್ಲಿ ತನ್ನೆಲ್ಲಾ ಸಿಬ್ಬಂದಿಗೆ ಲಸಿಕೆ ನೀಡಲು ಕಂಪನಿ ನಿರ್ಧರಿಸಿದೆ.

ಪ್ರಸ್ತುತ ಭಾರತದಲ್ಲಿ ಇನ್ಫಿ 2.43 ಲಕ್ಷ ಹಾಗೂ ಆಕ್ಸಂಚರ್ 1.70 ಲಕ್ಷ ಸಿಬ್ಬಂದಿಯನ್ನು ಹೊಂದಿದೆ.

ಖಾಸಗಿ ಆಸ್ಪತ್ರೆ ಸಹಯೋಗದಲ್ಲಿ ಸಿಬ್ಬಂದಿಗೆ ಲಸಿಕೆ ನೀಡಿದರೆ ಒಬ್ಬ ಸಿಬ್ಬಂದಿಗೆ 500 ರೂಪಾಯಿ ವೆಚ್ಚ ತಗುಲುತ್ತದೆ.

ನೇರವಾಗಿ ಲಸಿಕೆ ಉತ್ಪಾದನಾ ಕಂಪನಿಯಿಂದ ಖರೀದಿಸಿ, ತನ್ನ ಕಂಪನಿಯ ವೈದ್ಯ ಸಿಬ್ಬಂದಿ ಮೂಲಕ ಲಸಿಕೆ ನೀಡಿದರೆ ಈ ವೆಚ್ಚ ಕಡಿಮೆಯಾಗುವ ಸಾಧ್ಯತೆಗಳಿದೆ.

- Advertisement -
- Advertisement -
- Advertisement -

Latest article