ಮಂಗಳೂರು : ಡಾರ್ಜಿಲಿಂಗ್ ನಲ್ಲಿ ಸಂಚರಿಸುವ ಹಿಮಾಲಯನ್ ರೈಲ್ವೆ, ಮೌಂಟೆನ್ ರೈಲ್ವೆ, ಕಾಶ್ಮೀರ ಕಣಿವೆ, ಶಿಮ್ಲಾ ರೈಲ್ವೆ ಹೀಗೆ ದೇಶದ ಆಯ್ದೆ ಭಾಗಗಳಲ್ಲಿ ಸಂಚರಿಸುವ ಗಾಜಿನ ಛಾವಣಿ ಹೊಂದಿರುವ ರೈಲಿನ ಕೋಚ್ ಶೀಘ್ರದಲ್ಲೇ ಮಂಗಳೂರಿಗೂ ಬರಲಿದೆ.
ಕೇವಲ ಛಾವಣಿ ಮಾತ್ರವಲ್ಲದೆ ಬೋಗಿಯ ಕಿಟಕಿಗಳನ್ನು ಪಾರದರ್ಶಕವಾಗಿ ನಿರ್ಮಿಸಲಾಗಿರುತ್ತದೆ. ಇದರಿಂದಾಗಿ ರೈಲು ಓಡಾಡುವ ಸಂದರ್ಭದಲ್ಲಿ ಪರಿಸರದ ಸೌಂದರ್ಯವನ್ನು ಪ್ರಯಾಣಿಕರು ಸವಿಯಬಹುದಾಗಿದೆ.
ಇಂತಹುದೇ ವಿಸ್ಟಾ ಡೋಮ್ ಮಂಗಳೂರು ಬೆಂಗಳೂರು ನಡುವೆ ಓಡಾಡಲಿದೆ.
ಈ ಮೂಲಕ ಬೆಂಗಳೂರು ಮಂಗಳೂರು ನಡುವೆ ಸಂಚರಿಸುವ ಪ್ರಯಾಣಿಕರು ಹಗಲಿನ ಸಮಯದಲ್ಲಿ ಪ್ರಕೃತಿಯ ಸೌಂದರ್ಯ ಸವಿಯಬಹುದಾಗಿದೆ.
ಈಗಾಗಲೇ ರೈಲ್ವೆ ಇಲಾಖೆಯಿಂದ ನೈರುತ್ಯ ರೈಲ್ವೆಗೆ ಗಾಜಿನ ಛಾವಣಿ ಹೊಂದಿರುವ ವಿಸ್ಟಾಡೋಮ್ ಕೋಚ್ ಹಸ್ತಾಂತರಿಸಲಾಗಿದೆ.
ಈ ಕೋಚ್ ಅನ್ನು ಬೆಂಗಳೂರು ಮಂಗಳೂರು ನಡುವಿನ ಹಗಲು ರೈಲಿಗೆ ಜೋಡಿಸಲು ನಿರ್ಧರಿಸಲಾಗಿದೆ.
ಈ ಕೋಚ್ ಜೋಡಣೆ ಬಳಿಕ ಸುಬ್ರಹ್ಮಣ್ಯ, ಸಕಲೇಶಪುರ ಘಟ್ಟ ಪ್ರದೇಶ ನಡುವಿನ ಹಸಿರು ಪರಿಸರ, ಜಲಪಾತ ಎತ್ತರ ಸೇತುವೆಯನ್ನು ನೋಡಿ ಕಣ್ತುಂಬಿಸಿಕೊಳ್ಳಬಹುದಾಗಿದೆ.
ಒಂದು ಕೋಚ್ ನಲ್ಲಿ 40 ಪ್ರಯಾಣಿಕರಿಗೆ ಅವಕಾಶವಿದ್ದು 60 ಡಿಗ್ರಿ ಸುತ್ತುವ ಚೆಯರ್, ಮೈಕ್ರೋವೇವ್ ಒವನ್, ಫ್ರಿಡ್ಜ್ ವ್ಯವಸ್ಥೆ ಸೇರಿ ಅನೇಕ ಐಷರಾಮಿ ವ್ಯವಸ್ಥೆ ಇರುತ್ತದೆ.
ಈ ಕೋಚ್ ನ ಟಿಕೆಟ್ ದರವೂ ಸ್ವಲ್ಪ ದುಬಾರಿಯಾಗಿರುತ್ತದೆ.
Discussion about this post