ಚೆನೈ : ದೇಶದಲ್ಲಿ ಕೊರೋನಾ ಆತಂಕ ನಿಧಾನವಾಗಿ ಕರಗುತ್ತಿದೆ. ಪಾಸಿಟಿವ್ ಸಂಖ್ಯೆಗಳು ಇಳಿಮುಖವಾಗುತ್ತಿರುವ ಹಿನ್ನಲೆಯಲ್ಲಿ ಇದೀಗ ಅನೇಕ ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳುತ್ತಿದೆ.
ಜನ ಕೂಡಾ ಇನ್ನು ಮುಂದೆ ಕೊರೋನಾದೊಂದಿಗೆ ಜೀವನ ಅನಿವಾರ್ಯ ಅನ್ನುವುದನ್ನು ಮನಗಂಡಿದ್ದಾರೆ.
ಈ ನಡುವೆ 1 ವರ್ಷದ ಬಳಿಕ ಭಾರತದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ನಡೆಯುತ್ತಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪ್ರೇಕ್ಷಕರಿಲ್ಲದೆ ನಡೆದಿದ್ದು ಎರಡನೇ ಟೆಸ್ಟ್ ಮಂಗಳವಾರದಿಂದ ಪ್ರಾರಂಭಗೊಳ್ಳಲಿದೆ.
2 ನೇ ಟೆಸ್ಟ್ ಗೆ ಶೇ.50ರಷ್ಟು ಪ್ರೇಕ್ಷಕರನ್ನು ತುಂಬಿಸಲು ಬಿಸಿಸಿಐ ಹಾಗೂ ಟಿಎನ್ಸಿಎ ಒಪ್ಪಿಗೆ ನೀಡಿದ್ದು, ಕೇವಲ 1 ಗಂಟೆಯಲ್ಲಿ ಟಿಕೆಟ್ ಗಳು ಮಾರಾಟವಾಗಿದೆ.
ಎರಡನೇ ಟೆಸ್ಟ್ ನಡೆಯುವ ಚೆಪಾಕ್ ಕ್ರೀಡಾಂಗಣ ಒಟ್ಟು 33500 ಆಸನದ ಸಾಮರ್ಥ್ಯವನ್ನು ಹೊಂದಿದೆ.
ಈ ಪೈಕಿ ಪೆವಿಲಿಯನ್ ಕಡೆಯ ಆಸನಗಳನ್ನು ತುಂಬದಿರಲು ತೀರ್ಮಾನಿಸಲಾಗಿದೆ. ಹೀಗಾಗಿ 28 ಸಾವಿರ ಆಸನಗಳು ಮಾತ್ರ ಲಭ್ಯವಿದ್ದು, ಶೇ 50 ರಂತೆ 14 ಸಾವಿರ ಆಸನಗಳನ್ನು ಭರ್ತಿ ಮಾಡಬಹುದಾಗಿದೆ.
ಈ ಪೈಕಿ 4 ಸಾವಿರ ಆಸನಗಳು ಬಿಸಿಸಿಐ, ಟಿಎನ್ಸಿಎ ಹಾಗೂ ಪ್ರಾಯೋಜಕರಿಗಾಗಿ ಮೀಸಲಿಡಲಾಗಿದೆ.
ಇನ್ನುಳಿದ 10 ಸಾವಿರ ಸೀಟುಗಳನ್ನು ಈಗಾಗಲೇ ಮಾರಾಟ ಮಾಡಲಾಗಿದೆ.
Discussion about this post