ನವದೆಹಲಿ : ಭಾರತದ ಸ್ವದೇಶಿ ಲಸಿಕೆ ಕೋವ್ಯಾಕ್ಸಿನ್ ಹಾಗೂ ಸೀರಂ ಉತ್ಪಾದಿಸುತ್ತಿರುವ ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ದೇಶಕ್ಕೆ ಪ್ರವೇಶ ನೀಡುವಂತೆ ಭಾರತ ಸರ್ಕಾರ ಯುರೋಪ್ ಒಕ್ಕೂಟ ರಾಷ್ಟ್ರಗಳಿಗೆ ಮನವಿ ಮಾಡಿದೆ.
ಭಾರತದ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ಪಡೆದವರಿಗೆ ಯುರೋಪ್ ರಾಷ್ಟ್ರಗಳು ಪ್ರವೇಶ ನೀಡಲು ನಿರಾಕರಿಸುತ್ತಿದೆ. ಈ ಬಗ್ಗೆ ಮಧ್ಯಪ್ರವೇಶಿಸುವಂತೆ ಸೀರಂ ಸಂಸ್ಥೆಯ ಸಿಇಒ ಆದಾರ್ ಪೂನಾವಾಲ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ ಯುರೋಪ್ ರಾಷ್ಟ್ರಗಳಿಗೆ ಮನವಿ ಸಲ್ಲಿಸಿದೆ.

ಒಂದು ವೇಳೆ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಪಡೆದವರಿಗೆ ನೀವು ಅನುಮತಿ ನೀಡದಿದ್ರೆ, ನಿಮ್ಮ ಲಸಿಕೆ ಪ್ರಮಾಣಪತ್ರವನ್ನು ಒಪ್ಪಲು ಭಾರತ ಸಿದ್ದವಿಲ್ಲ. ಹೀಗಾಗಿ ಯುರೋಪ್ ನಿಂದ ಆಗಮಿಸುವ ಪ್ರತಿಯೊಬ್ಬರನ್ನೂ ಭಾರತದಲ್ಲಿ ಕ್ವಾರಂಟೈನ್ ಮಾಡುವುದಾಗಿ ಎಚ್ಚರಿಸಿದೆ.

Discussion about this post