ಕೊರೋನಾ ವಿರುದ್ಧ ಭಾರತ ನಡೆಸುತ್ತಿರುವ ಹೋರಾಟಕ್ಕೆ ಇದೀಗ ಮತ್ತೊಂದು ಲಸಿಕೆ ಬಲ ತುಂಬಿದೆ. ಈಗಾಗಲೇ ಭಾರತದಲ್ಲಿ 5 ಲಸಿಕೆಗಳು ಲಭ್ಯವಿದ್ದು ಎಲ್ಲವೂ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಹಂಚಿಕೆ ಮಾಡಲಾಗುತ್ತಿದೆ. ಇಂದು ಅನುಮತಿ ಪಡೆದಿರುವ 6ನೇ ಲಸಿಕೆ 12 ರಿಂದ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ನೀಡಲಾಗುತ್ತದೆ. ಈ ಮೂಲಕ ಇದೀಗ ಮಕ್ಕಳಿಗೂ ಬಂತು ಕೊರೋನಾ ಲಸಿಕೆ ಭಾರತದಲ್ಲಿ ಲಭ್ಯವಾಗಲಿದ್ದು, ಜೈಕೋವ್ – ಡಿ ಲಸಿಕೆ ಮಕ್ಕಳನ್ನು ಕೊರೋನಾ ವೈರಸ್ ನಿಂದ ರಕ್ಷಿಸುವ ಕೆಲಸ ಮಾಡಲಿದೆ.
ಈ ಸಂಬಂಧ ಝೈಡಸ್ ಸಂಸ್ಥೆ. ಜೈಕೋವ್ ಡಿ ಲಸಿಕೆಯ ತುರ್ತು ಬಳಕೆಗೆ DCGI ಅನುಮತಿ ನೀಡಿದ್ದು, ಮೂರು ಡೋಸ್ ಗಳ ಲಸಿಕೆ ಇದಾಗಿದೆ. ಈಗಾಗಲೇ ಈ ಲಸಿಕೆ ಶೇ 66ರಷ್ಟು ಪರಿಣಾಮಕಾರಿ ಎಂದು ಹೇಳಲಾಗಿದ್ದು, 12 ವರ್ಷ ಮೇಲ್ಪಟ್ಟವರು ಈ ಲಸಿಕೆ ಪಡೆಯಬಹುದಾಗಿದೆ. ಈ ಮೂಲಕ ಭಾರತ ಎರಡನೇ ಸ್ವದೇಶಿ ಲಸಿಕೆಯನ್ನು ಪಡೆದಂತಾಗಿದೆ.
ಇದನ್ನೂ ಓದಿ : ಈ ವಾರದಲ್ಲಿ ಭಾರತದಲ್ಲಿ ಮಕ್ಕಳಿಗೆ ಲಸಿಕೆ….
ಜೈಕೋವ್-ಡಿ (ZyCoV-D)ಎಂಬುದು ಭಾರತದ ಝೈಡಸ್ ಕ್ಯಾಡಿಲಾ ಔಷಧ ಸಂಸ್ಥೆ ಅಭಿವೃದ್ಧಿಪಡಿಸಿದ ವಿಶ್ವದ ಮೊದಲ ಡಿಎನ್‌ಎ ಕೋವಿಡ್ ಲಸಿಕೆಯಾಗಿದೆ. ವರ್ಷಕ್ಕೆ ಲಸಿಕೆಯ 120 ಮಿಲಿಯನ್ ಡೋಸ್ ತಯಾರಿಸಲು ಝೈಡಸ್ ಕ್ಯಾಡಿಲಾ ಯೋಜಿಸಿದೆ. ಈಗಾಗಲೇ ಭಾರತದಲ್ಲಿ ಕೋವ್ಯಾಕ್ಸಿನ್, ಕೋವಿಶೀಲ್ಡ್, ಜಾನ್ಸನ್ & ಜಾನ್ಸನ್, ಮಾರ್ಡೆನಾ ಮತ್ತು ಸುಟ್ನಿಕ್ V ಲಸಿಕೆಗಳು ಲಭ್ಯವಿದೆ.
Discussion about this post