ವಿಧಾನಸಭೆಯಲ್ಲಿ
ಮಂಡಿಸಲಾಗಿರುವ ವಿಶ್ವಾಸಮತ ಗೊತ್ತುವಳಿ ಕುರಿತ ಸುದೀರ್ಘ ಚರ್ಚೆಯ ಬಳಿಕ ಮಾತನಾಡಿದ ಸಿಎಂ
ಕುಮಾರಸ್ವಾಮಿ, ಕೈಕೊಟ್ಟ ಜೆಡಿಎಸ್ ಶಾಸಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಗೋಪಾಲಯ್ಯ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ, ಕೊಲೆ ಪ್ರಕರಣವೊಂದರಲ್ಲಿ ರಕ್ಷಣೆ ಕೊಡಲಿಲ್ಲ ಅನ್ನುವ ಕಾರಣಕ್ಕೆ ಕೈ ಕೊಟ್ಟರು ಎಂದು ದೂರಿದ್ದಾರೆ. ಐಎಂಎ ಪ್ರಕರಣದಲ್ಲೂ ಶಾಮೀಲಾದ ಮಂದಿಯೂ ರಕ್ಷಿಸಲಿಲ್ಲ ಅನ್ನುವ ಕಾರಣಕ್ಕೆ ನನ್ನ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಂಥವರನ್ನು ಕಟ್ಟಿಕೊಂಡು ಹೋಗ್ತಾರಂತೆ ಎಂದು ಬಿಜೆಪಿಯನ್ನು ತಿವಿದರು.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”69″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6920190723191627″);
document.getElementById(“div_6920190723191627”).appendChild(scpt);
ಇದೇ ನಡುವೆ ಕೆಆರ್ ಪೇಟೆ
ಶಾಸಕ ನಾರಾಯಣಗೌಡ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿದ ಕುಮಾರಸ್ವಾಮಿ, ಏಕವಚನದಲ್ಲೇ ತರಾಟೆಗೆ
ತೆಗೆದುಕೊಂಡರು.
2013ರ ಚುನಾವಣೆಯಲ್ಲಿ
ನಾರಾಯಣಗೌಡನಿಗೆ ಟಿಕೆಟ್ ಕೊಡುವುದು ಬೇಡ ಅಂದೆ, ಆದರೂ ಟಿಕೆಟ್ ಕೊಡಲಾಯ್ತು. ಗೆದ್ದು ಶಾಸಕರೂ
ಆದರು. 2018ರ ಚುನಾವಣೆಯಲ್ಲಿ ನಾರಾಯಣಗೌಡರಿಗೆ ಟಿಕೆಟ್ ಕೊಡುವುದು ಬೇಡ ಎಂದು ನಮ್ಮ
ಕುಟುಂಬಸ್ಥರೇ ಹೇಳಿದ್ದರು. ನಮ್ಮ ಕುಟುಂಬದ ಮಾನ ಮರ್ಯಾದೆ ಹಾಳು ಮಾಡುತ್ತಿದ್ದಾನೆ ಎಂದು ಅವರು
ಹೇಳಿದ್ದರು.
ನಾನೇ ಹಠ ಮಾಡಿ, ದೇವೇಗೌಡರು ಮತ್ತು ಕುಟುಂಬ ಸದಸ್ಯರ ವಿರೋಧ ಕಟ್ಟಿಕೊಂಡು ಟಿಕೆಟ್ ಕೊಡಿಸಿದೆ.ಅವನು ಎಂಥಾ ಗಿರಾಕಿ ಅಂದ್ರೆ, ಒಂದು ದಿವಸ ದೇವೇಗೌಡರ ಮನೆಗೆ ಐದಾರು ಕಾರ್ಯಕರ್ತರನ್ನು ಕರೆದುಕೊಂಡು ಬಂದಿದ್ದ. ಜೊತೆಗೊಂದು ಬ್ರಿಫ್ ಕೇಸ್ ತಂದಿದ್ದ.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”51″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_5120190723191627″);
document.getElementById(“div_5120190723191627”).appendChild(scpt);
ಬ್ರಿಫ್ ಕೇಸ್ ತಂದು
ದೇವೇಗೌಡರ ರೂಮ್ ನಲ್ಲಿ ಇಟ್ಟ. ದೇವೇಗೌಡರಿಗೆ ಕೆಳಗೆ ಇಳಿದು ಬರಲು ಆಗೋದಿಲ್ಲ. ಯಾರೇ ಬಂದ್ರೂ
ಬೆಡ್ ರೂಮ್ ಗೆ ಕರೆಯುತ್ತಾರೆ.
ಬ್ರಿಫ್ ಕೇಸ್ ಅಲ್ಲೆ ಇಟ್ಟು
ಹೊರಟು ಹೋದ, ಬಳಿಕ ಗನ್ ಮ್ಯಾನ್ ಗಳನ್ನು ಕರೆದ ದೇವೇಗೌಡರು ನಾರಾಯಣ ಗೌಡ ಬ್ರಿಫ್ ಕೇಸ್
ತಂದಿದ್ದಾನೆ, ತೆರೆದು ನೋಡಿ ಅಂದ್ರೆ ಒಂದು ಖಾದಿ ಪಂಚೆ, ಒಂದು ಜುಬ್ಬದ ಬಟ್ಟೆ ಇಟ್ಟು
ಹೋಗಿದ್ದಾನೆ.
ಆ ಕಾರ್ಯಕರ್ತರು
ದೇವೇಗೌಡರಿಗೆ ದೇಣಿಗೆ ಕೊಟ್ಟವನೇ ಅಂದುಕೊಳ್ಳಬೇಕು, ಎಂಥಾ ತಲೆ ಇರಬೇಕು ಲೆಕ್ಕ ಹಾಕಿ ಎಂದು ನಾರಾಯಣಗೌಡರ
ಸೂಟ್ ಕೇಸ್ ಕಥೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಬಿಚ್ಚಿಟ್ಟಿದ್ದಾರೆ.
Discussion about this post