ಬಾಂಬ್ ಗಳನ್ನು ಹೊತ್ತು ಸಾಗುತ್ತಿದ್ದ ಜಾಗ್ವಾರ್ ಯುದ್ಧ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದ ಪರಿಣಾಮ ಯುವ ಪೈಲಟ್ ತಮ್ಮ ಜೀವವನ್ನೇ ಪಣಕ್ಕಿಟ್ಟು ಸಂಭವಿಸಬೇಕಿದ್ದ ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ.
ಭಾರತೀಯ ವಾಯುಸೇನೆಯ ಜಾಗ್ವಾರ್ ಯುದ್ಧ ವಿಮಾನ ಅಂಬಾಲಾ ವಾಯುನೆಲೆಯಿಂದ ಆಗಸಕ್ಕೆ ಹಾರಿತ್ತು. ಈ ವೇಳೆ ಹಕ್ಕಿಗಳ ಗುಂಪು ಡಿಕ್ಕಿ ಹೊಡೆದ ಪರಿಣಾಮ ಯುದ್ಧ ವಿಮಾನದ ಎರಡು ಇಂಜಿನ್ ಗಳ ಪೈಕಿ ಒಂದು ಇಂಜಿನ್ ಸ್ಥಗಿತಗೊಂಡಿದೆ.
ತಕ್ಷಣ ಮುಂದಾಗಬಹುದಾದ ಅಪಾಯ ಅರಿತ ಅರಿತ ಪೈಲಟ್ ವಿಮಾನದಲ್ಲಿದ್ದ ಹೆಚ್ಚುವರಿ ಎರಡು ಇಂಧನ ಟ್ಯಾಂಕ್ ಮತ್ತು ಪ್ರ್ಯಾಕ್ಟೀಸ್ ಬಾಂಬ್ ಗಳನ್ನು ನೆಲಕ್ಕೆ ಎಸೆದು ಮುಂದಕ್ಕೆ ಸಾಗಿದ್ದಾರೆ.
ಈ ವೇಳೆ ಪೈಲೆಟ್ ಗೆ ಇದಿದ್ದು ಎರಡೇ ಆಯ್ಕೆ. ಮೊದಲನೇಯದ್ದು ಬಾಂಬ್ ಹಾಗೂ ಇಂಧನ ಟ್ಯಾಂಕ್ ಗಳನ್ನು ಉದುರಿಸಿ ಮುಂದಕ್ಕೆ ಸಾಗುವುದು, ಆ ವೇಳೆ ಒಂದಿಷ್ಟು ಹೆಚ್ಚು ಕಡಿಮೆಯಾಗಿದ್ದರೆ ಪೈಲೆಟ್ ಜೀವಕ್ಕೆ ಅಪಾಯವಿತ್ತು. ಎರಡನೆಯದ್ದು ವಿಮಾನದಿಂದ ಹಾರಿ ಜೀವ ಉಳಿಸಿಕೊಳ್ಳುವುದು.
ಆದರೆ ಧೈರ್ಯಶಾಲಿ ಪೈಲೆಟ್ ಮೊದಲನೇಯ ಆಯ್ಕೆಯನ್ನು ಜಾರಿ ಮಾಡಿದ್ದಾರೆ. ಎರಡನೇ ಆಯ್ಕೆಯನ್ನು ಜಾರಿ ಮಾಡಿದ್ದರೆ, ಪೈಲೆಟ್ ಜೀವ ಉಳಿಯುತ್ತಿತ್ತು, ಆದರೆ ವಿಮಾನ ವಾಯುನೆಲೆಯ ಪಕ್ಕದಲ್ಲಿದ್ದ ಮನೆಗಳ ಮೇಲೆ ಬೀಳುವ ಸಾಧ್ಯತೆ ಇತ್ತು. ಅಲ್ಲದೆ ಸ್ಫೋಟಕಗಳು ತುಂಬಿಕೊಂಡಿದ್ದರಿಂದ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು.
ಆದರೆ ಅದ್ಭುತ ಕಾರ್ಯಕ್ಷಮತೆ ಮೆರೆದ ಪೈಲೆಟ್ ತನಗಿಂದ ಬೇರೆಯವರ ಜೀವ ಮುಖ್ಯ ಎಂದು ಧೈರ್ಯ ಮೆರೆದಿದ್ದಾರೆ. ಜೊತೆಗೆ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ.
ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿಸಿದ ಪೈಲಟ್ ಅನ್ನು ವಾಯುಸೇನೆ ಪ್ರಶಂಸಿದೆ.
Discussion about this post