ಕೋಳಿ ಮೊದಲೋ ಮೊಟ್ಟೆ ಮೊದಲೋ ಅನ್ನುವ ಚರ್ಚೆ ಹಲವು ವರ್ಷಗಳಿಂದ ನಡೆಯುತ್ತಿದೆ. ಕೆಲವರು ಕೋಳಿ ಮೊದಲು ಅಂದ್ರೆ ಮತ್ತೆ ಕೆಲವರು ಮೊಟ್ಟೆ ಮೊದಲು ಅನ್ನುತ್ತಿದ್ದಾರೆ. ಆದರೆ ಈವರೆಗೂ ಒಮ್ಮತದ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ.
ಇನ್ನು ಜಗತ್ತಿನಲ್ಲಿ ಕೋಳಿಯ ಹುಟ್ಟು ಹೇಗಾಯ್ತು ಅನ್ನುವ ಬಗ್ಗೆ ಸಂಶೋಧನೆಗಳು ನಡೆಯುತ್ತಿದೆ. ಕೆಲವರ ಪ್ರಕಾರ 2500 ವರ್ಷಗಳ ಹಿಂದೆಯೇ ಕೋಳಿ ಫಾರಂ ಅನ್ನುವ ಪರಿಕಲ್ಪ ಇತ್ತು ಎನ್ನಲಾಗಿದೆ. ಈ ನಡುವೆ ಸಾವಿರ ವರ್ಷಗಳ ಹಿಂದೆ ಮಾನವನ ಜೊತೆ ಕೋಳಿಗಳಿತ್ತು ಅನ್ನುವುದಕ್ಕೆ ಸಾಕ್ಷಿ ಸಿಕ್ಕಿದೆ.

ಡೈಲಿ ಮೇಲ್ ವರದಿ ಪ್ರಕಾರ, ಇಸ್ರೇಲ್ ನಲ್ಲಿ ದೊಡ್ಡ ಮಟ್ಟದ ಉತ್ಖನನ ಕಾರ್ಯ ನಡೆಯುತ್ತಿದ್ದು, ಬೈಜಾಂಟೈನ್ ಯುಗದ ಕುರಿತಂತೆ ಸಂಶೋಧನೆಗಳು ನಡೆಯುತ್ತಿದೆ. ಈ ಸಂದರ್ಭದಲ್ಲಿ ಕೋಳಿ ಮೊಟ್ಟೆ ಸಿಕ್ಕಿದೆ. ಸೆಸ್ ಪಿಟ್ ನಲ್ಲಿ ಮಲದಿಂದ ಸುತ್ತುವರಿದಿದ್ದ ಕೋಳಿ ಮೊಟ್ಟೆಯ ಜೊತೆಗೆ ಆ ಕಾಲದ ಮೂಳೆ ಗೊಂಬೆಗಳು ಸಹಾ ಸಿಕ್ಕಿದೆ.ಮೊಟ್ಟೆಯಲ್ಲಿ ಬಿರುಕುಗಳಿದ್ದ ಕಾರಣ ಮೊಟ್ಟೆಯೊಳಗಿನ ಅಂಶಗಳೆಲ್ಲಾ ಭೂಮಿಯ ಒಡಲು ಸೇರಿದೆ.

ಸಾಮಾನ್ಯವಾಗಿ ಕೋಳಿ ಮೊಟ್ಟೆಯ ಶೆಲ್ ಗಳು ಭೂಮಿ ಸೇರಿದರೆ ವರ್ಷದೊಳಗೆ ಅದು ಮಣ್ಣಲ್ಲಿ ಮಣ್ಣಾಗಿ ಬಿಡುತ್ತದೆ. ಅಂತಹುದರಲ್ಲಿ ಈ ಕೋಳಿ ಮೊಟ್ಟೆ ಸಾವಿರ ವರ್ಷಗಳ ಕಾಲ ಉಳಿದಿರುವುದು ಅಚ್ಚರಿ ಮೂಡಿಸಿದೆ.
Discussion about this post