Monday, April 19, 2021

ನಟ ದರ್ಶನ್‌ಗೂ ಎದುರಾಯ್ತಾ ಕೊರೊನಾ ಕಂಟಕ?

Must read

- Advertisement -
- Advertisement -

ಬೆಂಗಳೂರು : ಕರ್ನಾಟಕದಲ್ಲಿ ಕೊರೋನಾ ಸೋಂಕಿನ ಎರಡನೆ ಅಲೆಯ ಅಬ್ಬರ ಶುರುವಾಗಿದೆ. ಎರಡನೇ ಅಲೆ ಮೊದಲ ಅಲೆಗಿಂತಲೂ ಭೀಕರವಾಗಿರಲಿದೆ ಅನ್ನುವ ಮುನ್ಸೂಚನೆ ಈಗಾಗಲೇ ಸಿಕ್ಕಿದೆ. ಈ ನಡುವೆ ಕೊರೋನಾ ಮತ್ತಷ್ಟು ಹರಡಲು ಪೂರಕವಾಗುವ ನಿರ್ಧಾರವೊಂದನ್ನು ಸರ್ಕಾರ ಕೈಗೊಂಡಿದೆ.

ಈ ನಡುವೆ ಚಂದನವನದ ಅನೇಕ ಮಂದಿ ಕೊರೋನಾ ಗೆದ್ದು ಬಂದಿದ್ದಾರೆ. ಇದೀಗ ನಟ ದೇವರಾಜ್ ಮನೆಗೂ ಕೊರೋನಾ ಕಂಟಕ ಎದುರಾಗಿದ್ದು, ದೇವರಾಜ್ ಪುತ್ರ ಪ್ರಜ್ವಲ್ ಮತ್ತು ಸೊಸೆ ರಾಗಿಣಿ ಕೊರೋನಾ ಸೋಂಕಿತರಾಗಿದ್ದಾರೆ. ಅವರಿಬ್ಬರು ವೈದ್ಯರ ನಿಗಾದಲ್ಲಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಅನ್ನುವ ಮಾಹಿತಿ ಲಭ್ಯವಾಗಿದೆ. ಜೊತೆಗೆ ಇನ್ನೊಂದೆರೆಡು ವಾರದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಸಾಧ್ಯತೆಗಳಿದೆ.

ಆದರೆ ಪ್ರಜ್ವಲ್ ಹಾಗೂ ರಾಗಿಣಿಗೆ ಕೊರೋನಾ ಸೋಂಕು ದೃಢವಾದ ಬೆನ್ನಲ್ಲೇ ನಟ ದರ್ಶನ್ ಗೂ ಕೊರೋನಾ ಕಂಟಕ ಎದುರಾಗಿದೆ. ರಾಗಿಣಿ ಹಾಗೂ ಪ್ರಜ್ವಲ್ ಕೊರೋನಾ ಸೋಂಕಿನ ಪರೀಕ್ಷೆಗೆ ಒಳಪಡುವ ಮೂರು ದಿನಗಳ ಮುಂಚೆ ನಟ ದರ್ಶನ್ ಅವರೊಂದಿಗೆ ಕಾಣಿಸಿಕೊಂಡಿದ್ದರು.

ದರ್ಶನ್ ಗೆ ಎದುರಾಯ್ತು ಕೊರೋನಾ ಕಂಟಕ
ರಾಬರ್ಟ್ ಚಿತ್ರದ ನೂರು ಕೋಟಿಯ ಸಂಭ್ರಮ ಬೆಂಗಳೂರಿನಲ್ಲಿ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಇಡೀ ದೇವರಾಜ್ ಕುಟುಂಬ ಪಾಲ್ಗೊಂಡಿತ್ತು. ಕೊರೋನಾ ಮುನ್ನೆಚ್ಚರಿಕೆ ಇಲ್ಲದ ನಡೆದ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಯಾವುದೂ ಇರಲಿಲ್ಲ.
ಪ್ರಜ್ವಲ್ ದೇವರಾಜ್ ದಂಪತಿಗೆ ಕೊರೋನಾ ಸೋಂಕಿಗೆ ತುತ್ತಾಗಿರುವ ಹಿನ್ನಲೆಯಲ್ಲಿ ಅವರ ಸಂಪರ್ಕಕ್ಕೆ ಬಂದವರು ಕೊರೋನಾ ಪರೀಕ್ಷೆಗೆ ಒಳಪಡಬೇಕಾಗಿದೆ. ಮಾತ್ರವಲ್ಲದೆ ಅವರು ಹೋಮ್ ಐಸೋಲೇಷನ್ ಗೂ ಒಳಪಡಬೇಕಾಗುತ್ತದೆ.

ಈ ನಿಯಮ ರಾಬರ್ಟ್ ಸಕ್ಸಸ್ ಪಾರ್ಟಿಯಲ್ಲಿ ಪಾಲ್ಗೊಂಡ ಎಲ್ಲರಿಗೂ ಅನ್ವಯವಾಗುತ್ತದೆ. ನಟ ದರ್ಶನ್ ಹಾಗೂ ದೇವರಾಜ್ ಕುಟುಂಬವಂತು ಈ ಪಾರ್ಟಿಯಲ್ಲಿ ತುಂಬಾ ಆತ್ಮೀಯವಾಗಿ ಬೆರೆತ್ತಿತ್ತು. ಈ ಎಲ್ಲಾ ಕಾರಣದಿಂದ ಇದೀಗ ನಟ ದರ್ಶನ್ ಅವರಿಗೆ ಕೊರೋನಾ ಆತಂಕ ಶುರುವಾಗಿದೆ.

- Advertisement -
- Advertisement -
- Advertisement -

Latest article