Monday, April 19, 2021

ಇದು ಪ್ರಳಯದ ಮುನ್ಸೂಚನೆಯೇ… ಕುಗ್ಗುತ್ತಿದೆಯಂತೆ ಶಿಶ್ನದ ಗಾತ್ರ – ಮೀನಿನ ಹೊಟ್ಟೆಯಲ್ಲಿ ಸಿಕ್ತು ಪ್ಲಾಸ್ಟಿಕ್

Must read

- Advertisement -
- Advertisement -

ಬೆಂಗಳೂರು : ಹಿಂದೆಲ್ಲಾ ಪ್ರಳಯವಾಗುತ್ತದೆಯಂತೆ ಅಂದ್ರೆ ನಗುವವರ ಸಂಖ್ಯೆಯೇ ಹೆಚ್ಚಿತ್ತು. ಸೂರ್ಯ ಚಂದ್ರರು ಇರುವ ತನಕ ಪ್ರಳಯ ಅಸಾಧ್ಯ ಅನ್ನುವುದು ಹಲವರ ಮಾತಾಗಿತ್ತು.

ಆದರೆ ಇದೀಗ ಪ್ರಳಯದ ಸ್ವರೂಪ ಬದಲಾಗಿದೆ. ಜೊತೆಗೆ ಪ್ರಳಯದ ಅನುಭವ ಶುರುವಾಗಿದೆ, ಒಂದು ಕಡೆ ಸೂರ್ಯೋದಯವಾದ್ರೆ ಸಾಕು ಮಧ್ಯಾಹ್ನವಾಯ್ತೇ ಅನ್ನುವಂತೆ ಸುಡುತ್ತಿದೆ.

ಮತ್ತೊಂದು ಕಡೆ ಜಗತ್ತಿನಲ್ಲಿ ಆಗಬಾರದ, ನಡೆಯಬಾರದ ಘಟನೆಗಳು ನಡೆಯುತ್ತಿದೆ. ಧಾರ್ಮಿಕ ನಂಬಿಕೆಗಳ ಕಡೆ ನೋಡುವುದಾದರೆ ಮನುಷ್ಯನ ಪಾಪದ ಕೆಲಸಗಳು ಜಾಸ್ತಿಯಾದ್ರೆ ಪ್ರಳಯ ಖಚಿತವಂತೆ.

ವೈಜ್ಞಾನಿಕವಾಗಿ ನೋಡಿದರೂ ಪಾಪದ ಕೆಲಸದಿಂದ ಪ್ರಳಯ ಗ್ಯಾರಂಟಿ. ಇದಕ್ಕೊಂದು ಉದಾಹರಣೆ ಹೆಚ್ಚುತ್ತಿರುವ ಜಾಗತಿಕ ತಾಪಮಾನ. ಕಾಡು ಕಡಿದು, ಪ್ರಕೃತಿಯ ಮೇಲೆ ನಡೆಸಿದ ಅತ್ಯಾಚಾರ ಪರಿಣಾಮ ಇದೀಗ ಕಾಣಿಸಿಕೊಳ್ಳಲಾರಂಭಿಸಿದೆ.

ಈ ನಡುವೆ ಪರಿಸರ ಮಾಲಿನ್ಯದ ಕಾರಣದಿಂದ ಜನಿಸುವ ಮಕ್ಕಳ ಶಿಶ್ನದ ಗಾತ್ರ ಕುಗ್ಗುತ್ತಿದೆ. ಬೆಳೆಯುತ್ತಿರುವ ಮಕ್ಕಳು, ಪುರುಷರಲ್ಲಿ ಶಿಶ್ನ ವಿರೂಪಗೊಳ್ಳುತ್ತಿದೆ ಅನ್ನುವ ವರದಿಯೊಂದನ್ನು ತಜ್ಞರೊಬ್ಬರು ಕೊಟ್ಟಿದ್ದಾರೆ.

ಅಮೆರಿಕಾದ ನ್ಯೂಯಾರ್ಕ್ ನ ಮೌಂಟ್ ಸಿನಾಯಿ ಆಸ್ಪತ್ರೆ ಮತ್ತು ಸಂಶೋಧನಾ ಪರಿಸರ ಸಂಸ್ಥೆಯ ಪ್ರಾಧ್ಯಾಪಕರೊಬ್ಬರು ನಡೆಸಿರುವ ಸಂಶೋಧನೆಯಲ್ಲಿ ಇದು ಬಹಿರಂಗಗೊಂಡಿದೆ.

ವಾಯು ಮಾಲಿನ್ಯ, ಭೂ ಮಾಲಿನ್ಯದ ಕಾರಣದಿಂದ ಮಾನವನ ಸಂತಾನೋತ್ಪತ್ತಿಯ ಮೇಲೆ ದುಷ್ಪಾರಿಣಾಮ ಬೀರುತ್ತಿದೆ. ಹೀಗಾಗಿ ಹುಟ್ಟುತ್ತಿರುವ ಮಕ್ಕಳ ಜನನಾಂಗ ಕುಗ್ಗುತ್ತಿದೆ.

ಪರಿಸರ ಮಾಲಿನ್ಯ ಪುರುಷರ ವೀರ್ಯದ ಉತ್ಪತ್ತಿಯ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಸಂತಾನೋತ್ಪತ್ತಿ ಕುಗ್ಗುತ್ತಿದೆ ಅಂದಿದ್ದಾರೆ. ಅಲ್ಲಿಗೆ ಮಾನವ ಕುಲದ ನಾಶಕ್ಕೆ ಮುನ್ನುಡಿ ಅಂದಾಯ್ತು.

ಮತ್ತೊಂದು ಕಡೆ ಮಂಗಳೂರಿನ ಅತ್ತಾವರದ ಮೀನು ಮಾರಾಟ ಮಳಿಗೆಯಲ್ಲಿ ಮೀನು ಕತ್ತರಿಸುವ ವೇಳೆ ಅದರ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಪತ್ತೆಯಾಗಿದೆ.

ಮೀನುಗಳು ಎಂದಿಗೂ ಪ್ಲಾಸ್ಟಿಕ್ ತಿನ್ನುವುದಿಲ್ಲ ಅಂದ ಮೇಲೂ ಪ್ಲಾಸ್ಟಿಕ್ ಪತ್ತೆಯಾಗಿದೆ ಅಂದ್ರೆ ಸಮುದ್ರ, ಕೆರೆಗಳು ಎಷ್ಟರ ಮಟ್ಟಿಗೆ ಮಲೀನವಾಗಿರಬೇಕು.

ಹೀಗಿದಾಗ ಮೇಲೆ ಪ್ರಳಯದ ಮುನ್ಸೂಚನೆ ಕೊಡಲು ದೇವರು ದಿಂಡರ ಅಗತ್ಯವೇನಿದೆ. ಹೀಗೆ ನಾವು ಪರಿಸರ ಮಾಲಿನ್ಯವನ್ನು ಮುಂದುವರಿಸಿಕೊಂಡು ಹೋದ್ರೆ ಕೆಲವೇ ವರ್ಷಗಳಲ್ಲಿ ಜಗತ್ತು ನಾಶವಾಗುವುದರಲ್ಲಿ ಸಂಶಯವೇ ಬೇಡ.

- Advertisement -
- Advertisement -
- Advertisement -

Latest article