ಯಾಕ್ರೀ, ಈ ರೀತಿ ಪಾತ್ರಗಳಲ್ಲಿ ನಟಿಸಿ ಜನರನ್ನು ಹಾಳು ಮಾಡುತ್ತೀರಾ? ಲಿಪ್ ಕಿಸ್, ಸಿಗರೇಟ್ ಸೇದಿದ್ರೆ ಹೆಣ್ಣು ಮಕ್ಕಳು ಥಿಯೇಟರ್ ಗಳಲ್ಲಿ ಕುಳಿತು ಸಿನಿಮಾ ನೋಡಲು ಮುಜುಗರ ಪಡುವಂತಾಗುತ್ತದೆ ಎಂದು ನಟ ಹುಚ್ಚ ವೆಂಕಟ್ ರಚಿತಾ ವಿರುದ್ಧ ಗರಂ ಆಗಿದ್ದಾರೆ.
ಏಕ್ ಲವ್ ಯಾ’ ಸಿನಿಮಾದಲ್ಲಿ ರಚಿತಾ ರಾಮ್ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿರುವುದು ಹುಚ್ಚ ವೆಂಕಟ್ ನೆಮ್ಮದಿಗೆ ಧಕ್ಕೆ ತಂದಿದೆ. ಹೀಗಾಗಿ ಈ ಸಂಬಂಧ ವಿಡಿಯೋ ಮಾಡಿರುವ ಅವರು ರಚಿತಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವೇಳೆ ರಚಿತಾ ಪೋಷಕರಿಗೂ ಕಿವಿ ಮಾತು ಹೇಳಿರುವ ವೆಂಕಟ್, ಇಂತಹ ಆಶ್ಲೀಲ ಸಿನಿಮಾಗಳಲ್ಲಿ ನಟಿಸಲು ಹಿರೋಯಿನ್ ಪೋಷಕರು ಅವಕಾಶ ನೀಡಬಾರದು ಅಂದಿದ್ದಾರೆ.
ಇನ್ನು ಪ್ರೇಮ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಹುಚ್ಚ ವೆಂಕಟ್, ನಿನಗೆ ಬೇಕಿತ್ತಾ? ಇದರಿಂದ ಜನರಿಗೆ ಏನು ತೋರಿಸುತ್ತಿದ್ದೀರಾ?ಲಿಪ್ ಕಿಸ್ , ಸಿಗರೇಟ್ ಸೇದೋ ದೃಶ್ಯಕ್ಕೆ ಕತ್ತರಿ ಹಾಕಿ ಎಂದು ಒತ್ತಾಯಿಸಿದ್ದಾರೆ.
Discussion about this post