ಕನ್ನಡದ ರಿಯಾಲಿಟಿ ಶೋಗಳಲ್ಲೇ ಸಾಕಷ್ಟು ಸದ್ದು ಮಾಡಿರುವ ಬಿಗ್ ಬಾಸ್ ಕಾರ್ಯಕ್ರಮ ಏಳನೇ ಅವೃತಿಗೆ ಕಾಲಿಡುತ್ತಿದೆ.
ಈಗಾಗಲೇ ಕಾರ್ಯಕ್ರಮಕ್ಕಾಗಿ ಭರದ ಸಿದ್ದತೆಗಳು ನಡೆದಿದ್ದು, ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಅಂತಿಮಗೊಂಡಿದೆ. ಮಹಾಮನೆಯ ಪ್ರವೇಶಕ್ಕೆ ಅವಕಾಶ ಪಡೆದಿರುವ ಸೆಲೆಬ್ರೆಟಿಗಳು ಈಗಾಗಲೇ ಒಪ್ಪಂದಕ್ಕೆ ಸಹಿ ಹಾಕಿದ್ದು, ಒಂದು ರೌಂಡ್ ಶಾಪಿಂಗ್ ಕೂಡಾ ಮುಗಿಸಿದ್ದಾರೆ.
ಜೊತೆಗೆ ವಾಹಿನಿ ಕೂಡಾ ಕಾರ್ಯಕ್ರಮ ಪ್ರಸಾರಕ್ಕೆ ಸಿದ್ದವಾಗಿದ್ದು, ಮೊದಲ ಪ್ರೋಮೋ ಈಗಾಗಲೇ ಆನ್ ಏರ್ ನಲ್ಲಿದೆ. ಆದರೆ ಬಿಗ್ ಬಾಸ್ ಕಾರ್ಯಕ್ರಮ ಯಾವಾಗ ಪ್ರಾರಂಭವಾಗುತ್ತದೆ ಅನ್ನುವುದು ಇನ್ನೂ ಬಹಿರಂಗವಾಗಿರಲಿಲ್ಲ.
ಅಕ್ಟೋಬರ್ ಎರಡನೇ ವಾರದಿಂದ ಮಹಾಮನೆ ಸಂಭ್ರಮ
ಇದೀಗ ಸುದೀಪ್ ಅವರೇ ಬಿಗ್ ಬಾಸ್ ಪ್ರಸಾರದ ದಿನಾಂಕವನ್ನು ಪ್ರಕಟಿಸಿದ್ದಾರೆ. ಸದ್ಯಕ್ಕೆ ಸುದೀಪ್ ತಮ್ಮ ಮಹತ್ವಾಕಾಂಕ್ಷಿ ಸಿನಿಮಾ ‘ಪೈಲ್ವಾನ್’ ಪ್ರಮೋಷನ್ ಕಾರ್ಯಗಳಲ್ಲಿ ಬಿಝಿಯಾಗಿದ್ದಾರೆ. ಇತ್ತೀಚೆಗೆ ಮುಂಬಯಿನ ಟ್ವಿಟರ್ ಕಚೇರಿಯ ಬ್ಲೂ ರೂಮ್ನಲ್ಲಿ ಕುಳಿತು #AskPailwaan ಹ್ಯಾಶ್ಟ್ಯಾಗ್ ಮೂಲಕ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಇದು ಸಂಪೂರ್ಣವಾಗಿ ಪೈಲ್ವಾನ್ಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೂ ಕೆಲವರು ಚೌಕಟ್ಟು ಮೀರಿ ಕೆಲವು ಪ್ರಶ್ನೆಗಳನ್ನು ಸುದೀಪ್ಗೆ ಕೇಳಿದ್ದಾರೆ. ಅವುಗಳಲ್ಲಿ ಬಿಗ್ ಬಾಸ್ ಹೊಸ ಸೀಸನ್ ಯಾವಾಗ ಆರಂಭವಾಗುತ್ತದೆ ಎಂಬುದೂ ಒಂದು ಪ್ರಶ್ನೆ.
ಈ ಪ್ರಶ್ನೆಗೆ ಉತ್ತರಿಸಿರುವ ಸುದೀಪ್, ಅಕ್ಟೋಬರ್ ಎರಡನೇ ವಾರದಲ್ಲಿ ಸಾರ್ ಎಂದಿದ್ದಾರೆ.
Discussion about this post