ಹುಲಿಯಾ ಡೈಲಾಗ್ ಮೂಲಕ ವೈರಲ್ ಆದ ಪೀರಪ್ಪ ಕಟ್ಟಿಮನಿ ಅವರನ್ನು ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿಯಾಗಿದ್ದಾರೆ.
ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಈ ಭೇಟಿ ನಡೆದಿದ್ದು, ಪಬ್ಲಿಕ್ ಟಿವಿ ಇವರಿಬ್ಬರ ಬೇಡಿಕೆಗೆ ವೇದಿಕೆ ಸಿದ್ದಪಡಿಸಿಕೊಟ್ಟಿತ್ತು.
ಹೌದು ಹುಲಿಯಾ ಡೈಲಾಗ್ ವೈರಲ್ ಆಗುತ್ತಿದ್ದಂತೆ ಪೀರಪ್ಪ ಅವರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದ ಪಬ್ಲಿಕ್ ಟಿವಿ ವಿಶೇಷ ಸಂದರ್ಶನ ಪ್ರಸಾರ ಮಾಡಿತ್ತು. ಈ ವೇಳೆ ಸಿದ್ದರಾಮಯ್ಯ ಅವರನ್ನು ಬೇಡಿಕೆಯಾಗಬೇಕು. ಅವರು ಹೊಡೆದರೂ ನಾನು ಹೊಡೆಸಿಕೊಳ್ಳಲು ಸಿದ್ದ ಎಂದು ಪೀರಪ್ಪ ಹೇಳಿದ್ದರು.
ಹೀಗಾಗಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿಸಲು ನಿರ್ಧರಿಸಿದ ಪಬ್ಲಿಕ್ ಟಿವಿ ಪೀರಪ್ಪ ಅವರನ್ನು ಕಾವೇರಿ ನಿವಾಸಕ್ಕೆ ಕರೆದುಕೊಂಡು ಹೋಗಿತ್ತು.
ಈ ವೇಳೆ ಪಕೀರಪ್ಪ ಕಟ್ಟಿಮನಿ ಸಿದ್ದರಾಮಯ್ಯನವರ ಕಾಲಿಗೆ ಮುಗಿದು ನಮಸ್ಕರಿಸಿ ನೀವೆ ನಮ್ಮ ಒಡೆಯಾ ನೀವು ಕೊಟ್ಟ ಒಂದು ರೂಪಾಯಿ ಕೆ.ಜಿ ಅಕ್ಕಿ ತಿಂದು ಇವತ್ತು ಉದ್ಧಾರ ಆಗಿದ್ದೀವಿ ಒಡೆಯ ಅಂತಾ ಸಿದ್ದರಾಮಯ್ಯರಿಗೆ ನಮಸ್ಕರಿಸಿದ್ದಾರೆ.
ಈ ವೇಳೆ ನೀನು ಬಿಜೆಪಿ ಸೇರಿದೆಯಂತೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ರೆ, ನಾನು ಬಿಜೆಪಿ ಸೇರಿಲ್ಲ ಕಾಂಗ್ರೆಸ್ ಬಿಟ್ಟಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ ಪೀರಪ್ಪ.
ಪಕೀರಪ್ಪ ಭೇಟಿ ಮಾಡಿದ ಬಳಿಕ ಸಿದ್ದರಾಮಯ್ಯ ನವರು ಟ್ವೀಟ್ ಮಾಡಿದ್ದು ಕಾಗವಾಡದಲ್ಲಿ ನನ್ನ ಭಾಷಣದ ವೇಳೆ ಹೌದು ಹುಲಿಯಾ ಅಂತಾ ಅವನದ್ದೇ ಶೈಲಿಯಲ್ಲಿ ಪ್ರೀತಿಯಿಂದ ಕೂಗಿದ್ದ ಈ ಪೀರಪ್ಪ ಕಟ್ಟಿಮನಿ. ಅಷ್ಟೇ ಪ್ರೀತಿಯಿಂದ ನನ್ನ ಆರೋಗ್ಯ ವಿಚಾರಿಸಲು ಬಂದಿದ್ದಾನೆ. ನಿಷ್ಕಲ್ಮಶ ಪ್ರೀತಿ ತುಂಬಿದ ಹೃದಯದ ಇತನೇ ನಿಜವಾದ ಹುಲಿಯಾ ಅಂದಿದ್ದಾರೆ.
Discussion about this post