ಮೇಷ
ಅನೇಕ ರೀತಿಯ ಲಾಭ ದೊರೆಯುವ ಸಾಧ್ಯತೆ ಇದೆ. ಆದರ್ಶ ವ್ಯಕ್ತಿತ್ವದಿಂದ ಜನ ಮನ್ನಣೆಗೆ ಪಾತ್ರರಾಗುವಿರಿ. ಎಲ್ಲ ಕೆಲಸಗಳೂ ಸಕಾಲದಲ್ಲಿ ಪೂರ್ಣವಾಗುವವು. ಕೌಟುಂಬಿಕ ವಿವಾದ ಕೊನೆಗೊಳ್ಳುವದು
6
ವೃಷಭ
ಹೊಟ್ಟೆಕಿಚ್ಚು ಮಾಡುವವರಿಗೆ ತಕ್ಕ ಶಾಸ್ತಿಯಾಗಲಿದೆ. ಶತ್ರುಗಳು ತಾವಾಗಿಯೇ ದೂರಸರಿಯುವರು. ಜನರೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಯಾಗುವದು. ಯುಕ್ತಿಯಿಂದ ಕಾರ್ಯಸಾಧಿಸುವಿರಿ.
9

ಮಿಥುನ
ಸ್ವಜನರಲ್ಲಿ ಮನಸ್ತಾಪ. ದೇಹಾರೋಗ್ಯವೂ ಸರಿಯಿರದೆ ತಾಪದಾಯಕವಾಗುತ್ತದೆ. ಆದರೆ ಶ್ರೇಷ್ಠ ಜನರಿಂದ ಪುರಸ್ಕಾರ. ಸಾಂಸಾರಿಕ ದೃಷ್ಟಿಯಲ್ಲೂ ತೃಪ್ತಿದಾಯಕವಿದ್ದು ನೆಮ್ಮದಿ ಉಂಟಾಗುತ್ತದೆ.
1
ಕರ್ಕ
ಅಲ್ಪ ತೃಪ್ತಿ, ವ್ಯಾಪಾರದಲ್ಲಿ ನಿರಾಸಕ್ತಿ, ಅಪೇಕ್ಷಿತ ಕೆಲಸಗಳು ನೆರವೇರುವವು, ಧನಲಾಭ, ವಿದ್ಯಾರ್ಥಗಳು, ಶಿಕ್ಷಕರು ಹಾಗೂ ಹಿರಿಯರಿಗೆ ಕೀರ್ತಿದಾಯಕ. ಆಲಸ್ಯದಿಂದ ತೊಂದರೆ ಇರುವದು ಗುರುಸ್ತೋತ್ರ ಪಾರಾಯಣ ಮಾಡಿರಿ.
3
ಸಿಂಹ
ನಿಶ್ಚಿತ ಆರ್ಥಿಕ ಸ್ಥಿತಿ ಇರುವದರಿಂದ ಹೆಚ್ಚಿನ ತೊಂದರೆ ಇಲ್ಲದಿದ್ದರೂ ಅಲ್ಪ ಹಾನಿಯ ಸಂಭವವಿದೆ. ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸುವಿರಿ. ಕೌಟುಂಬಿಕ ಕಾರ್ಯಗಳನ್ನು ನಿರ್ಲಕ್ಷಿಸ ಬೇಡಿ.
5
ಕನ್ಯಾ
ಲೇವಾದೇವಿ ವ್ಯವಹಾರದಲ್ಲಿ ಅನಿರೀಕ್ಷಿತ ಏರಿಕೆ ಕಂಡುಬರುವದು. ಸಂಗಡಿಗರು ಸಹಕಾರ ತೋರುವದರಿಂದ ನಿರಾತಂಕ ಜೀವನ ಇರುವದು. ಮಾಡುವ ಕಾರ್ಯಗಳಲ್ಲಿ ಯಶಸ್ಸು ದೊರೆಯುವದು. ಆರ್ಥಿಕ ಸಂಕಷ್ಟ ದೂರಾಗುವದು.
8
ತುಲಾ
ಕಾಯಕನಿಷ್ಠೆ ನಿಮಗೇ ಹೊರೆಯಾಗದಂತೆ ನೋಡಿಕೊಳ್ಳಿರಿ. ನಿರಂತರ ದುಡಿಮೆಯಿಂದ ಅನಾರೋಗ್ಯ ಅಥವಾ ಮಾನಸಿಕ ಕಿರಿಕಿರಿ ಆಗುವ ಸಂಭವವಿದೆ. ಹಣಕಾಸಿನಿನ ವ್ಯವಹಾರದಲ್ಲಿ ಎಚ್ಚರಿಕೆವಹಿಸಿರಿ.
4
ವೃಶ್ಚಿಕ
ಅಂತಃಶತ್ರುಗಳ ಕಾಟ ಹೆಚ್ಚಾಗುವ ಲಕ್ಷಣವಿದೆ. ಹಳೆಯ ಸಮಸ್ಯೆಗಳು ಮತ್ತೆ ಎದುರಾಗುವ ಸಂಭವವಿದೆ.ಚಂಚಲತೆ ಬೇಡ, ಹಿಡಿದ ಕಾರ್ಯವನ್ನು ಪೂರ್ಣಗೊಳಿಸಿ.ಆರ್ಥಿಕ ಲಾಭವಿದೆ ಆದರೆ ವಿದ್ಯೆಯಲ್ಲಿ ಹಿನ್ನಡೆ ಕಂಡುಬರುವದು.
7
ಧನು
ಕೃಷಿಮೂಲದ ಲಾಭ ದೊರೆಯುವದು. ಸಹೋದ್ಯೋಗಿಗಳ ಸಹಾಯ ಅಪೃಕ್ಷಿಸದೇ ಸ್ವಂತಬಲದಿಂದ ಕೆಲಸ ನಿರ್ವಹಿಸಿರಿ.ಕೈಗೊಂಡ ಕಾರ್ಯಗಳು ಯಶಸ್ವಿಯಾಗುವವು. ನೌಕರರಿಗೆ ಕಿರಿಕಿರಿಯಾಗುವ ಸಂಭವವಿದೆ.
2
ಮಕರ
ಎಲ್ಲವೂ ಇದ್ದಂತೆ ಇರಲಿ ಎಂಬ ಮನೋಭಾವನೆ ಇರುವದು. ಕೆಲಸದಲ್ಲಿ ಬದಲಾವಣೆ ತರಲು ಪ್ರಯತ್ನಿಸಿ. ವಿದೇಶ ಪ್ರಯಾಣದ ಯೋಗವಿದೆ.ಉದ್ಯೋಗದಲ್ಲಿ ಪ್ರಗತಿ ಮುಂದುವರೆಯುವದು.
1
ಕುಂಭ
ಧನ ಅಪವ್ಯಯವಾಗುವ ಲಕ್ಷಣಗಳಿವೆ ಆದರೆ ಸಣ್ಣ ವ್ಯಾಪಾರಿಗಳಿಗೆ ಉತ್ತಮ ಲಾಭವಾಗುವದು. ಶ್ರಮಿಕವರ್ಗಕ್ಕೆ ಉನ್ನತಿ ಇರುವದು. ಕೌಟುಂಬಿಕ ಸಂಬಂಧಗಳು ಫಲಿಸುವವು. ಋಣಪರಿಹಾರವಾಗುವದು.
6
ಮೀನ
ದಿನೇ ದಿನೇ ಅಭಿವೃದ್ಧಿ ತೋರಿ ವ್ಯವಹಾರಗಳೆಲ್ಲಾ ಇಷ್ಟದಂತೆ ನಡೆಯುತ್ತದೆ. ಹಲವು ರೀತಿಯಿಂದ ಧನಾಗಮನ ತೋರಿಬರುತ್ತದೆ. ಐಶ್ವರ್ಯ, ಮುಟ್ಟಿದ್ದು ಚಿನ್ನವಾಗುವ ಕಾಲ. ಸ್ಥಿರಾಸ್ತಿ ಪ್ರಾಪ್ತಿ. ಅಲ್ಪ ಅನಾರೋಗ್ಯ ತೋರಿದರೂ ಕ್ಷಣಿಕವೆನ್ನಬಹುದು.
8
ಡಾ.ಬಸವರಾಜ್ ಗುರೂಜಿ ವೈದಿಕ ಜ್ಯೋತಿಷಿ
9972848937
Discussion about this post