ಮೇಷ: ವ್ಯಾಪಾರದಲ್ಲಿ ಅದೃಷ್ಟ ಲಾಭವಿದೆ. ವಿದ್ಯಾರ್ಥಿಗಳ ಮನೋಭಿಲಾಷೆ ಈಡೇರುವುದು. ಮನೆಯ ಜವಾಬ್ದಾರಿಗಳು ಹೆಚ್ಚುವವು. ಹಿರಿಯರ ಆರೋಗ್ಯದಲ್ಲಿ ಏರುಪೇರಾಗುವ ಸಂಭವ.
6
ವೃಷಭ: ದೂರಾಲೋಚನೆಯಿಂದ ಕಾರ್ಯದಲ್ಲಿ ಯಶಸ್ಸು. ಆಸ್ತಿ ಖರೀದಿ ಸಾಧ್ಯ. ವೈವಾಹಿಕ ಚಿಂತೆ ಇರುವುದು. ಧಾರ್ಮಿಕ ಸಮಾರಂಭಗಳಲ್ಲಿ ಭಾಗಿಯಾಗುವ ಯೋಗ. ಧಾರ್ಮಿಕ ಕ್ಷೇತ್ರಗಳ ದರ್ಶನ ಯೋಗ.
2
ಮಿಥುನ: ಹೊಸ ಆಸ್ತಿ ಖರೀದಿ ಅಥವಾ ಹೊಸ ಹೂಡಿಕೆ ಬೇಡ. ಕಂಟಕದಿಂದ ಪಾರಾಗುವ ಯೋಗ. ಒಳ್ಳೆಯ ಸ್ವಭಾವ ಇರುವದರಿಂದ ಉದ್ಯೋಗದಲ್ಲಿ ಹೆಚ್ಚಿನ ಬಡ್ತಿಯಾಗುವ ಕಾಲ.
8
ಕಟಕ: ಹಳೆಯ ಸಾಲ ಮರುಪಾವತಿಯಾಗುವುದು. ಬೇಡವಾದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಂಭವವಿದೆ. ಆತುರತೆಯ ನಿರ್ಣಯಗಳು ಅಪಾಯ ತರಬಹುದು.
1
ಸಿಂಹ: ಕೆಲಸಗಳು ನಿಧಾನಗತಿಯಲ್ಲಿ ಸಾಗುವವು ಸೂಕ್ಷ್ಮತೆಯಿಂದ ವ್ಯವಹರಿಸಿರಿ. ಮಹತ್ವದ ಕಾರ್ಯ ಕಲಾಪಗಳಲ್ಲಿ ಭಾಗವಹಿಸುವ ಯೋಗ. ಮನೋಚಿಂತಿತ ಕಾರ್ಯ ಕೈಗೂಡುವದು. ಹಳೆಯ ಸಾಲ ತೀರುವುದು. 7
ಕನ್ಯಾ: ಜಿಪುಣತನದಿಂದ ತೊಂದರೆಯಾಗುವ ಸಾಧ್ಯತೆ ಇದೆ. ಸಹೋದರ ಸಂಬಂಧದಲ್ಲಿ ಭಿನ್ನಾಭಿಪ್ರಾಯ ಬರುವ ಸಾಧ್ಯತೆ ಇದೆ. ಪರಸ್ಪರ ದೋಷಾರೋಪ ಬೇಡ. ಮಿತ್ರರ ಸಹಾಯ ದೊರೆಯುವುದು. ಶುಭಸಂಖ್ಯೆ
4
ತುಲಾ: ಕೈಹಾಕಿದ ಕೆಲಸಗಳು ನಿರಾತಂಕವಾಗಿ ಮುಂದುವರೆಯುವವು. ಉತ್ತಮವಾದ ಸಮಯ ಇರುವುದರಿಂದ ಮನೆಯಲ್ಲಿ ಸಂಭ್ರಮದ ವಾತಾವರಣ. ಹೊಸ ಯೋಜನೆಗಳಿಗೆ ಚಾಲನೆ ದೊರೆಯುವುದು.
5
ವೃಶ್ಚಿಕ: ಹಾನಿ ತಪ್ಪಿಸಲು ಪ್ರಯತ್ನಿಸುವಿರಿ. ಕಠಿಣ ಆತಂಕದಿಂದ ಪಾರಾಗುವಿರಿ. ಅಧಿಕಾರಿಗಳ ಉಪದ್ರವಕ್ಕೆ ಮಣಿಯದೇ ಡಿಟ್ಟತನದಿಂದ ಕೆಲಸ ನಿರ್ವಹಿಸಿ. ವ್ಯಾಪಾರವೃದ್ಧಿಯಾಗುವುದು. ಆರ್ಥಿಕ ಸಂಕಷ್ಟ ದೂರಾಗುವುದು.
5
ಧನು: ಬರುವ ಕಷ್ಟಗಳನ್ನು ಎದುರಿಸಿ ಸಫಲತೆಯನ್ನು ಹೊಂದುವಿರಿ. ಭಾಗ್ಯವೃದ್ಧಿಯಾಗುವ ಯೋಗವಿದೆ. ವ್ಯವಹಾರದಲ್ಲಿಯ ಅಡಚಣೆಗಳು ದೂರಾಗುವವು.
3
ಮಕರ: ವ್ಯವಹಾರದಲ್ಲಿ ಅಡೆತಡೆಗಳು ಕಂಡುಬರುವವು. ಜಿಪುಣತನದಿಂದ ತೊಂದರೆಯಾಗುವ ಸಾಧ್ಯತೆ ಇದೆ. ಅಗೌರವ ಆಗುವ ಸಂಭವ ಇರುವುದರಿಂದ ಸೂಕ್ಷ್ಮವಾಗಿರುವುದು ಉತ್ತಮ. ಹೊಸ ಯೋಜನೆಗಳಿಗೆ ಚಾಲನೆ
9
ಕುಂಭ: ಗಣ್ಯರೊಂದಿಗೆ ವ್ಯವಹಾರಿಕ ಬಾಂಧವ್ಯ ವೃದ್ಧಿಯಾಗುವುದು. ಸಾಮಾಜಿಕ ಕ್ಷೇತ್ರದಲ್ಲಿ ಮಾನ ಸಮ್ಮಾನಗಳು ದೊರೆಯುವವು. ನೌಕರರ ತೊಂದರೆಗಳು ನಿವಾರಣೆಯಾಗುವವು.
8
ಮೀನ: ಅನಾವಶ್ಯಕ ತಿರುಗಾಟ, ನೌಕರಿಯಲ್ಲಿ ಕಿರಿಕಿರಿ, ಸ್ಥಾನಪಲ್ಲಟ ಸಾಧ್ಯತೆ, ಬಡ್ತಿಯೋಗ, ಮಹಿಳೆಯರು, ವಿದ್ಯಾರ್ಥಿಗಳಿಗೆ ಸಂತೋಷ
3
Discussion about this post