ರಾಯಚೂರು : ಶಿಕ್ಷಕರು ಅಂದ್ರೆ ದೇವರಿಗೆ ಸಮಾನ. ಭವಿಷ್ಯದ ಪ್ರಜೆಗಳನ್ನು ರೂಪಿಸುವ ಮಹತ್ತರ ಹೊಣೆ ಇವರ ಮೇಲಿದೆ. ಆದರೆ ಈಗ ಕಾಲ ಬದಲಾಗಿದೆ. ಶಿಕ್ಷಕ ಅನ್ನುವುದು ವೃತ್ತಿಯಾಗಿದೆ. ಮಾತ್ರವಲ್ಲದೆ ಕೆಲ ಶಿಕ್ಷಕರು ನಡೆದುಕೊಳ್ಳುವ ರೀತಿಯಿಂದ ಇಡೀ ಶಿಕ್ಷಕ ಸಮುದಾಯ ತಲೆ ತಗ್ಗಿಸುವ ಪರಿಸ್ಥಿತಿಗೆ ಬಂದು ನಿಂತಿದೆ.
ಈ ನಡುವೆ ತರಗತಿಯಲ್ಲಿ ಪಾಠ ಮಾಡುವ ಬದಲು ಶಿಕ್ಷಕನೊಬ್ಬ ಹೈಸ್ಕೂಲ್ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡ್ತಾನೆ ಅನ್ನುವ ಆರೋಪ ಹೇಳಿ ಬಂದಿದೆ. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ವಟಗಲ್‌ನಲ್ಲಿರುವ ವಸತಿ ಶಾಲೆಯಲ್ಲಿ ಗಣಿತ ಪಾಠ ಮಾಡೋ ಅತಿಥಿ ಶಿಕ್ಷಕ ಹೆಣ್ಣು ಮಕ್ಕಳ ಕೈ ಹಿಡಿದು ಅಶ್ಲೀಲವಾಗಿ ವರ್ತನೆ ಮಾಡ್ತಾನೆ ಅನ್ನುವ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ವಿದ್ಯಾರ್ಥಿನಿಯರು ಶಾಲಾ ಪ್ರಾಂಶುಪಾಲರಿಗೆ ದೂರು ನೀಡಿದ್ದು, ಘಟನೆಗೂ ನಮಗೂ ಸಂಬಂಧಿಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
Discussion about this post