ಕೆಲ ವಾಹನ ಸವಾರರ ನಿರ್ಲಕ್ಷ್ಯದಿಂದ ಅಮಾಯಕರ ಜೀವ ಬಲಿಯಾಗುತ್ತಿರುವುದನ್ನು ಮನಗಂಡ ಕೇಂದ್ರ ಸರ್ಕಾರ ಇತ್ತೀಚೆಗೆ ಟ್ರಾಫಿಕ್ ನಿಯಮ ಉಲ್ಲಂಘನೆಯ ದಂಡದ ಮೊತ್ತವನ್ನು ಹೆಚ್ಚಿಸಿತ್ತು.
Get upto 50% off on 3 Doors Wardrobe
ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ನಯಾಪೈಸೆ ದಂಡ ಕಟ್ಟುವ ಅಗತ್ಯವಿರುವುದಿಲ್ಲ, ಆದರೂ ರಾಜಕೀಯ ಕಾರಣಗಳಿಗಾಗಿ ಇದನ್ನು ಅನೇಕರು ವಿರೋಧಿಸುತ್ತಿದ್ದಾರೆ. ನಿಯಮ ಪಾಲಿಸಿದರೆ ತಮಗೆ ಒಳ್ಳೆಯದು ಅನ್ನುವುದು ಗೊತ್ತಿದ್ದರೂ, ದುಬಾರಿ ದಂಡದ ಅರಿವಿದ್ದರೂ ಕೆಲವರು ಕಾನೂನು ಗಾಳಿಗೆ ತೂರುವುದನ್ನು ಇನ್ನೂ ನಿಲ್ಲಿಸಿಲ್ಲ.
ಈ ನಡುವೆ ಜನತೆಯ ಆಕ್ರೋಶದಿಂದ ಎಲ್ಲಿ ಆಡಳಿತ ವಿರೋಧಿ ಅಲೆಗೆ ಸಿಲುಕಿ ಹಾಕಿಕೊಳ್ಳಬೇಕಾಗುತ್ತದೋ ಅನ್ನುವ ಆತಂಕದಿಂದ ಕೆಲ ರಾಜ್ಯ ಸರ್ಕಾರಗಳು ದಂಡ ಮೊತ್ತವನ್ನು ಕಡಿತಗೊಳಿಸಲು ಮುಂದಾಗಿದೆ.
ಈಗಾಗಲೇ ಗುಜರಾತ್ ಸರ್ಕಾರ ದಂಡದ ಮೊತ್ತವನ್ನು ಶೇ50ರಷ್ಟು ಇಳಿಸಿದೆ. ಇದರ ಬೆನ್ನಲ್ಲೇ ಉತ್ತರಾಖಂಡ್ ಸರ್ಕಾರ ಕೂಡಾ ಇಳಿಕೆ ಮಾಡಿತ್ತು. ಇದಾದ ನಂತರ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹಲವು ಬಿಜೆಪಿ ರಾಜ್ಯಗಳು ಸಹ ದರವನ್ನು ಇಳಿಕೆ ಮಾಡಲು ಚಿಂತಿಸಿವೆ.
ವಿಪರೀತವಾಗಿ ಏರಿರುವ ಟ್ರಾಫಿಕ್ ದಂಡ ಮುಂಬರುವ ಉಪಚುನಾವಣೆಯಲ್ಲಿ ಪರಿಣಾಮ ಬೀರಬಹುದು ಎಂದು ಭಯಗೊಂಡಿರುವ ಸಿಎಂ ಯಡಿಯೂರಪ್ಪ ಕೂಡಾ ದಂಡದಲ್ಲಿ ಕಡಿತಗೊಳಿಸಲು ಮುಂದಾಗಿದ್ದರು. ಈ ಸಂಬಂಧ ಅಧಿಕಾರಿಗಳಿಗೆ ಸೂಚನೆ ಕೂಡಾ ಕೊಟ್ಟಿದ್ದರು.
ಆದರೆ ಈಗ ಕೇಂದ್ರ ಸರ್ಕಾರ ಇದಕ್ಕೆ ತಣ್ಣೀರು ಎರಚಿದ್ದು, ಸಾಲು ಸಾಲು ರಾಜ್ಯಗಳು ಕೇಂದ್ರದ ಕಾನೂನಿಗೆ ಸೆಡ್ಡು ಹೊಡೆಯುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಹಾಗೇ ನೋಡಿದರೆ ದಂಡವನ್ನು ಕಡಿತಗೊಳಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ. ಸಂಗ್ರಹವಾದ ದಂಡದ ಮೊತ್ತದ ಕೂಡಾ ರಾಜ್ಯದ ಬೊಕ್ಕಸಕ್ಕೆ ಸೇರುತ್ತದೆ.
ಆದರೆ ಒಂದೊಂದು ರಾಜ್ಯ ಸರ್ಕಾರಗಳು ಒಂದೊಂದು ದರವನ್ನು ನಿಗದಿ ಪಡಿಸಿದರೆ ಕಾಯ್ದೆಯ ಮೂಲ ಸ್ವರೂಪವೇ ಬದಲಾಗುತ್ತದೆ. ಹೀಗಾಗಿ ಕೇಂದ್ರ ಸಾರಿಗೆ ಇಲಾಖೆ ಕಾನೂನು ಸಚಿವಾಲಯದ ಮೊರೆ ಹೋಗಿದೆ. ರಾಜ್ಯ ಸರ್ಕಾರದ ನಿರ್ಧಾರಕ್ಕೆ ಬ್ರೇಕ್ ಹಾಕುವ ಕುರಿತಂತೆ ಸಲಹೆ ಕೇಳಲಾಗಿದೆ.
ಹೀಗಾಗಿ ಕರ್ನಾಟಕದಲ್ಲಿ ದಂಡ ಮೊತ್ತದಲ್ಲಿ ದೊಡ್ಡ ಮೊತ್ತದ ಕಡಿತ ನಿರೀಕ್ಷಿಸಿದವರಿಗೆ ದೊಡ್ಡ ಶಾಕ್ ಕಾದಿದೆ.
ಹೀಗಾಗಿ ರಾಜ್ಯಗಳ ದಂಡ ಕಡಿತ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಆದೇಶ ಹೊರಡಿಸುವ ಸಾಧ್ಯತೆಗಳಿದ್ದು, ಅಂತಿಮವಾಗಿ ಕೇಂದ್ರ ಸರ್ಕಾರದ ಆದೇಶವನ್ನೇ ಪಾಲಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ.
ಟ್ರಾಫಿಕ್ ದಂಡ ಏರಿಕೆ ಉದ್ದೇಶ ಜನರ ಜೀವ ರಕ್ಷಣೆಗಾಗಿಯೇ ಹೊರತು ಸರ್ಕಾರಕ್ಕೆ ಆದಾಯ ತರುವುದಲ್ಲ ಅನ್ನುವುದನ್ನು ಈಗಾಗಲೇ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಜನರನ್ನು ಪ್ರಾಣಾಪಾಯದಿಂದ ಪಾರು ಮಾಡುವ ಸಲುವಾಗಿ ಜಾರಿಗೆ ಬಂದಿರುವ ತಿದ್ದುಪಡಿ ಕಾಯ್ದೆಗೆ ರಾಜ್ಯ ಸರ್ಕಾರ ಅಡ್ಡಿ ಮಾಡುತ್ತಿರುವುದು ದುರಂತವೇ ಸರಿ.
Discussion about this post