ಮಗನ ಸೋಲಿನ ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಟೀಕಿಸಿದ್ದಾರೆ.
ವೋಟ್ ಮಾತ್ರ ಮೋದಿಗೆ ಹಾಕ್ತೀರಿ, ಸಮಸ್ಯೆ ಮಾತ್ರ ನನ್ನತ್ರ ಹೇಳ್ತೀರಿ… ಎಂಬ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿವಾದಾತ್ಮಕ ಹೇಳಿಕೆ ಕುರಿತು ಗುರುವಾರ ನವದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು ಮಾತನಾಡಿದ ಅವರು , ಜನರು ಮತ ನೀಡಿ ಕುಮಾರಸ್ವಾಮಿ ಅವರನ್ನುಮುಖ್ಯಮಂತ್ರಿಯನ್ನಾಗಿ ಮಾಡಿಲ್ಲ. ಅವರು ಇನ್ನೂ ಯಾಕೆ ಸಿಎಂ ಆಗಿದ್ದಾರೆ? ಕಾಂಗ್ರೆಸ್‌ನೊಂದಿಗೆ ಅನಾರೋಗ್ಯಕರ ಮೈತ್ರಿಯಲ್ಲಿ ಮುಂದುವರಿಯುತ್ತಿದ್ದಾರೆ ಎಂದರು.
Discussion about this post