ಹಾವೇರಿ : ನಾಡಿನೆಲ್ಲೆಡೆ ಇಂದು ಶಿವರಾತ್ರಿ ಸಂಭ್ರಮ. ಆಸ್ತಿಕರು ಶ್ರದ್ಧಾ ಭಕ್ತಿಯಿಂದ ನೀಲಕಂಠನ ಆರಾಧನೆಯಲ್ಲಿ ತೊಡಗಿದ್ದಾರೆ.
ಈ ನಡುವೆ ಹಾವೇರಿ ತಾಲೂಕಿನ ಕಾಟೇನಹಳ್ಳಿ ಗ್ರಾಮದ ಯುವಕನೊಬ್ಬ ತನ್ನ ನೆಚ್ಚಿನ ನಟನಿಗೆ ಪೂಜೆ ಸಲ್ಲಿಸುವ ಮೂಲಕ ಶಿವರಾತ್ರಿ ಹಬ್ಬವನ್ನು ಆಚರಿಸಿದ್ದಾನೆ.

ರವಿಕರಿಯಮ್ಮನವರ್ ಕಿಚ್ಚನ ಅಪ್ಪಟ ಅಭಿಮಾನಿಯಾಗಿದ್ದು, ಚಿಕ್ಕ ವಯಸ್ಸಿನಿಂದಲೇ ಸುದೀಪ್ ನನ್ನು ಆರಾಧ್ಯ ದೈವ ಎಂದೇ ಭಾವಿಸಿದ್ದ.
ಸುದೀಪ್ ಅಂದ್ರೆ ರವಿಗೆ ಅದೆಷ್ಟು ಇಷ್ಟ ಅಂದ್ರೆ, ಮನೆಯ ತುಂಬೆಲ್ಲಾ ಸುದೀಪ್ ಭಾವಚಿತ್ರಗಳೇ ತುಂಬಿಕೊಂಡಿದೆ.
ಸುದೀಪ್ ಹುಟ್ಟು ಹಬ್ಬವನ್ನು ತನ್ನದೆ ಹುಟ್ಟು ಹಬ್ಬ ಅನ್ನುವಂತೆ ಆಚರಿಸುವ ರವಿ ಅಂದು ಗ್ರಾಮಕ್ಕೆಲ್ಲಾ ಸಿಹಿ ಹಂಚಿ ಸಂಭ್ರಮಿಸುತ್ತಾನೆ.

ಇಂದು ಶಿವರಾತ್ರಿಯನ್ನು ಡಿಫರೆಂಟ್ ಆಗಿ ಆಚರಿಸಲು ಹೊರಟ ರವಿ ತನ್ನ ನೆಚ್ಚಿನ ನಾಯಕನಿಗೆ ಪೂಜೆ ಮಾಡಿ ಸುದ್ದಿಯಲ್ಲಿದ್ದಾನೆ.
Discussion about this post