ಮದರಂಗಿ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಜೊತೆಗೆ ಪತ್ನಿ ಮಿಲನ ನಾಗರಾಜ್ ಮದುವೆಯಾದ ಬಳಿಕ ಪತಿಯೊಂದಿಗೆ ಮೊದಲ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದಾರೆ.
ಲಾಕ್ ಡೌನ್ ಕಾರಣದಿಂದ ಈ ಬಾರಿ ಸರಳವಾಗಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಕೃಷ್ಣ ಕುಟುಂಬ ಸದಸ್ಯರೊಂದಿಗೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ.
ಈ ನಡುವೆ ಪತ್ನಿ ಮಿಲನ ನಾಗರಾಜ್, ಕೃಷ್ಣನ ಜನ್ಮ ದಿನದಂದು ಲವ್ ಮ್ಯಾಕ್ವೇಲ್ 2 ಚಿತ್ರದ ಹೊಸ ಪೋಸ್ಟರ್ ಅನ್ನು ಗಿಫ್ಟ್ ರೂಪದಲ್ಲಿ ನೀಡಿದ್ದಾರೆ.
ಲವ್ ಮ್ಯಾಕ್ವೇಲ್ ಯಶಸ್ಸಿನ ನಂತರ ಈ ಚಿತ್ರದ ಸೀಕ್ವೆಲ್ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಅದರಂತ ಸೀಕ್ವೆಲ್ ನ ಕೆಲಸಗಳು ನಡೆಯುತ್ತಿದೆ.
ಇನ್ನು ಕೃಷ್ಣ ಹುಟ್ಟು ಹಬ್ಬದ ಸಲುವಾಗಿ ಶುಗರ್ ಫ್ಯಾಕ್ಟರಿ ಚಿತ್ರತಂಡದಿಂದ ಟೀಸರ್ ಬಿಡುಗಡೆಯಾಗಲಿದೆ.
Discussion about this post