ಮೈಸೂರು : ಜಿಟಿ ದೇವೇಗೌಡ ಅವರಿಗೆ ಜೆಡಿಎಸ್ ಬಾಗಿಲು ಬಂದ್ ಆಗಿದೆ ಅನ್ನೋ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಜಿಟಿ ದೇವೇಗೌಡ ತಿರುಗೇಟು ನೀಡಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮಾತನಾಡಿದ ಅವರು ನಾನು ಈಗ್ಲೂ ಜೆಡಿಎಸ್ ನಲ್ಲೇ ಇದ್ದೇನೆ. ವಿಧಾನಸಭೆಯಲ್ಲೂ ಜೆಡಿಎಸ್ ಶಾಸಕರ ಜೊತೆಯೇ ಕುಳಿತುಕೊಳ್ಳುತ್ತೇನೆ.ಪಕ್ಷ ವಿರೋಧಿ ಚಟುವಟಿಕಯನ್ನೂ ನಡೆಸಿಲ್ಲ ಅಂದಿದ್ದಾರೆ.
ಮೈಮುಲ್ ಚುನಾವಣೆಯಲ್ಲಿ ಎಚ್ ಡಿ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಗಳ ವಿರುದ್ಧವೇ ಅಪಪ್ರಚಾರ ನಡೆಸುತ್ತಿದ್ದಾರೆ.

ಮೈಸೂರಿನ ಹೈಕಮಾಂಡ್ ಮಾತು ಕೇಳಿಕೊಂಡು ಕುಮಾರಸ್ವಾಮಿ ಹೀಗಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಸಾರಾ ಮಹೇಶ್ ವಿರುದ್ಧ ಕಿಡಿ ಕಾರಿದರು.
ಇದೇ ವೇಳೆ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಜಿಟಿ ದೇವೇಗೌಡ, ಮಹಾಭಾರತದಲ್ಲಿ ಶಕುನಿಯಿಂದ ಕೌರವರ ಸಂತತಿ ನಾಶವಾಯ್ತು. ರಾಮಾಯಾಣ ಮಂಥರೆಯ ಮಾತು ಕೇಳಿ ರಾಮ ವನವಾಸಕ್ಕೆ ಹೋಗುವಂತಾಯ್ತು. ಮೈಸೂರಿನಲ್ಲಿ ಶಕುನಿ, ಮಂಥರೆಯ ಮಾತು ಕೇಳಿ ಕುಮಾರಸ್ವಾಮಿ ಜೆಡಿಎಸ್ ಪಕ್ಷವನ್ನೇ ಸರ್ವನಾಶ ಮಾಡಲು ಹೊರಟಿದ್ದಾರೆ ಎಂದು ದೂರಿದರು.
Discussion about this post