ಬೆಂಗಳೂರು : ಪತ್ನಿ ಹಾಗೂ ನಾದಿನಿಯನ್ನು ಕೊಲೆ ಮಾಡಿದ್ದ ಅಪರಾಧಿ ವೀಣಾ ವಾದಕ ಬಿಎಂ ಚಂದ್ರಶೇಖರ್ ಎಂಬವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
2013ರ ಏಪ್ರಿಲ್ 18 ರಂದು ಪತ್ನಿ ಪ್ರೀತಿ ಅವರನ್ನು ಚಂದ್ರಶೇಖರ್ ರಾಡ್ ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದ.
ಇದೇ ವೇಳೆ ಮನೆಯಲ್ಲಿದ್ದ ನಾದಿನಿ ವೇದಾ ಈ ಕೊಲೆಗೆ ಸಾಕ್ಷಿಯಾಗಬಹುದೆಂದು ಅವರನ್ನೂ ಕೊಲೆ ಮಾಡಿದ್ದ.
ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡ ಗಿರಿನಗರ ಠಾಣಾ ಪೊಲೀಸರು 69ನೇ ಸೆಷನ್ಸ್ ನ್ಯಾಯಾಲಯಕ್ಕೆ ಜಾರ್ಜ್ ಶೀಟ್ ಸಲ್ಲಿಸಿದ್ದರು.
ವಾದ ಪ್ರತಿವಾದ ಆಲಿಸಿದ ನ್ಯಾಯಾಲಯದ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲವಾದಲ್ಲಿ ಒಂದು ವರ್ಷ ಹೆಚ್ಚುವರಿ ಶಿಕ್ಷೆ ಅನುಭವಿಸುವಂತೆ ಆದೇಶಿಸಿದೆ.
ವೀಣಾ ವಾದಕ ಚಂದ್ರಶೇಖರ್, ಶಾಲಾ ಶಿಕ್ಷಕಿಯಾಗಿದ್ದ ಪ್ರೀತಿ ಆಚಾರ್ಯ ಅವರನ್ನು 2010ರಲ್ಲಿ ಪ್ರೀತಿಸಿ ವಿವಾಹವಾಗಿದ್ದ. ಬಳಿಕ ಇವರಿಬ್ಬರ ನಡುವೆ ಕೌಟುಂಬಿಕ ಕಲಹ ಕಾಣಿಸಿಕೊಂಡಿತ್ತು ಎನ್ನಲಾಗಿದೆ.
Discussion about this post