Monday, April 19, 2021

ಹುಲಿ ಆನೆ ಜೊತೆ ಸೆಣಸಾಡಿ ಪುಟ್ಟಗೌರಿನೇ ಗೆದ್ದು ಬಂದಿದ್ದಾಳೆ…ಅಂದ ಮೇಲೆ ಗೀತಾಳಿಗೆ ಅದ್ಯಾವ ಲೆಕ್ಕ

Must read

- Advertisement -
- Advertisement -

ಇತ್ತೀಚಿನ ದಿನಗಳಲ್ಲಿ ಹಲವು ಧಾರಾವಾಹಿಗಳು ಸೆನ್ಸಿಟಿವಿಯನ್ನೇ ಕಳೆದುಕೊಂಡಿದೆ. ಎಲ್ಲರಿಗೂ ಟಿ.ಆರ್.ಪಿ ಯೇ ಮುಖ್ಯ.

ಅದೆಷ್ಟೋ ಧಾರಾವಾಹಿಗಳು ಪ್ರಾರಂಭವಾದ ಕಥೆಯನ್ನು ಮರೆತು ಬಿಟ್ಟಿರುತ್ತದೆ.

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವುದು ಗೀತಾ,

ಕಲರ್ಸ್ ಕನ್ನಡ ಧಾರಾವಾಹಿಯಲ್ಲಿ ಬರುತ್ತಿರುವ ಕೆಲ ದೃಶ್ಯಗಳು, ಅದರ ಕಥೆ ನಿಜಕ್ಕೂ ನಗು ತರಿಸುವಂತಿದೆ.

ಇದೀಗ ಗೀತಾ ಮತ್ತು ವಿಜಿಯ ಪ್ರೇಮ ಕಥೆಯ ಹಿಂದೆ ಬಿದ್ದಿರುವ ನಿರ್ದೇಶಕರು, ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ಗೀತಾ ಅಪಾಯಕ್ಕೆ ಸಿಲುಕಿರುವ ಕಥೆ ಇದೀಗ ಪ್ರಾರಂಭಗೊಂಡಿದ್ದು, ವಿಜಿ ಆಕೆಯನ್ನು ಕಾಪಾಡುತ್ತಾನೆಯೇ ಇಲ್ಲವೋ ಅನ್ನುವುದೇ ಪ್ರಶ್ನೆ.

ಈ ಪ್ರಶ್ನೆಗೆ ವೀಕ್ಷಕರೊಬ್ಬರು, ಎಂತೆತಾ ಹುಲಿ ಆನೆ ಜೊತೆ senasaadi ಗೆದ್ದ ನಮ್ ಪುಟ್ ಗೌರಿ ಮುಂದೆ ಇದೆಲ್ಲ ಏನ್ ದೊಡ್ ಮಹಾ ಸೀನ್ ಅಂದಿದ್ದಾರೆ.

ಮತ್ತೆ ಕೆಲವರು ಈ ಧಾರಾವಾಹಿ ಮುಗಿದ್ರೆ ಸಾಕು ಅಂದಿದ್ದಾರೆ.

ಇನ್ನು ಇದೇ ಧಾರಾವಾಹಿಯಲ್ಲಿ ಗೀತಾಳನ್ನು ಕಾಪಾಡಲು ಹೊಟೇಲ್ ನಿಂದ ಊಟ ಪಾರ್ಸೇಲ್ ಮಾಡಿ ಬೆಟ್ಟದ ಕಡೆ ಹೊರಟಿರುವ ವಿಜಿ ಹೋಟೆಲ್ ಮ್ಯಾನೇಜರ್ ಬಳಿ ಟಾರ್ಜ್ ಗಾಗಿ ಬೇಡಿಕೆ ಇಡುತ್ತಾನೆ.

ಈ ವೇಳೆ ಸಂಜೆ 5 ಗಂಟೆ ನಂತ್ರ ಬೆಟ್ಟದ ಕಡೆ ಹೋಗಬಾರದು, ರಾತ್ರಿ ಹೊತ್ತು ಅಲ್ಲಿಗೆ ಹೋದವರು ಯಾರೂ ಬಂದಿಲ್ಲ ಎಂದು ಮ್ಯಾನೇಜರ್ ಎಚ್ಚರಿಕೆ ಬೇರೆ ಕೊಡ್ತಾನೆ.

ಆದರೆ ದೃಶ್ಯ ನೋಡಿದರೆ ಅವೆಲ್ಲವೂ ಮಟ ಮಟ ಮಧ್ಯಾಹ್ನದ ದೃಶ್ಯಗಳು.

ಇನ್ನು ವಿಜಿ ಬೆಟ್ಟ ಹತ್ತುವಾಗಲು ನೆರಳು ನೆತ್ತಿಯ ಮೇಲಿದೆ. ಹಾಗಿದ್ದ ಮೇಲೆ 5 ಗಂಟೆಯ ವಿಚಾರವ್ಯಾಕೆ ಬೇಕಿತ್ತು.

ಏನು ಮಾಡಲಾಗದು ಎಲ್ಲವೂ ಸೀರಿಯಲ್ ಮಹಿಮೆ. ಆದರೂ ನಿರ್ದೇಶಕರು ಒಂದಿಷ್ಟು ನೈಜತೆಗೆ ಒತ್ತುಕೊಡಬೇಕಲ್ವ.

- Advertisement -
- Advertisement -
- Advertisement -

Latest article