ಅಕ್ರಮವಾಗಿ ದರಕಾಸ್ತ್ ಕಮಿಟಿ ದಾಖಲೆಗಳನ್ನು ಸೃಷ್ಟಿ
ಕೋಲಾರ ಜಿಲ್ಲೆಯಲ್ಲಿ ಅಕ್ರಮ ಸಾಗುವಳಿ ಚೀಟಿ ರದ್ದು ಮಾಡಿ ಪೆಂಡಿಂಗ್ ನಂಬರ್ ದುರಸ್ತಿ ಮಾಡಲು ವಿಶೇಷ ತಂಡ ರಚನೆ ಮಾಡಬೇಕೆಂದು ಉಪವಿಭಾಗಾಧಿಕಾರಿ ಡಾ. ಮೈತ್ರಿ ಅವರಿಗೆ ರೈತ ಸಂಘ ಮನವಿ ಸಲ್ಲಿಸಿತು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ರೈತರ ಹೆಸರಿನಲ್ಲಿ ಅಕ್ರಮವಾಗಿ ದರಕಾಸ್ತ್ ಕಮಿಟಿ ದಾಖಲೆಗಳನ್ನು ಸೃಷ್ಟಿಸಿ ನಕಲಿ ಸಾಗುವಳಿ ಚೀಟಿ ಪಡೆದು ನೂರಾರು ಎಕರೆ ಸರ್ಕಾರಿ ಜಮೀನನ್ನು ಬೆಂಗಳೂರಿನ ಭೂಗಳ್ಳರು ಕಬಳಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಾನೂನು ಪ್ರಕಾರ ರೈತರಿಗೆ ಮಂಜೂರಾಗಿರುವ ಸರ್ಕಾರಿ ಗೋಮಾಳ ಜಮೀನಿನ ಪೆಂಡಿಂಗ್ ನಂಬರ್ ದುರಸ್ತಿಯಾಗದ ಕಾರಣ ಜಮೀನು ಮಾರಾಟ ಮಾಡಲಾಗದೇ, ಬ್ಯಾಂಕ್ನಲ್ಲಿ ಸಾಲ ಪಡೆಯಲಾಗದೇ ಪರದಾಡುತ್ತಿದ್ದಾರೆ. ಕೂಡಲೇ ಪೆಂಡಿಂಗ್ ನಂಬರ್ ನೀಡುವಂತೆ ಒತ್ತಾಯಿಸಿದರು.