ಒಂದು ಕಾಲದಲ್ಲಿ ಶಾಂತಿಯ ನಾಡಾಗಿದ್ದ ಅಫ್ಘಾನ್ ನಲ್ಲಿ ಇದೀಗ ರಕ್ತದ ಹೊಳೆ ಹರಿಯುತ್ತಿದೆ. ರಾಕ್ಷಸರ ಕೈಗೆ ಸಿಕ್ಕಿರುವ ರಾಷ್ಟ್ರ ಇದೀಗ ಹಿಂಸೆಯ ನೆಲವಾಗಿದೆ. ಈ ನಡುವೆ ತಮ್ಮದೇ ರಾಷ್ಟ್ರವನ್ನು ಅಲ್ಲಿನ ಪ್ರಜೆಗಳು ತೊರೆಯುತ್ತಿದ್ದಾರೆ ಅಂದ್ರೆ ಪರಿಸ್ಥಿತಿ ಹೇಗಿರಬಹುದು.
ಈ ನಡುವೆ ವಿವಿಧ ದೇಶಗಳನ್ನು ತಮ್ಮ ಪ್ರಜೆಗಳನ್ನು ಆಫ್ಘಾನ್ ನಿಂದ ಏರ್ ಲಿಫ್ಟ್ ಮಾಡುತ್ತಿದ್ದು, ಭಾರತ ಸಹ ಈಗಾಗಲೇ ಅನೇಕರನ್ನು ತವರಿಗೆ ಕರೆಸಿಕೊಂಡಿದೆ. ಈ ನಡುವೆ ಕತಾರ್ ,ಅಮೇರಿಕಾದ ಕಂಪನಿಗಳ ಮೂಲಕ ಅಫ್ಘಾನ್ ಗೆ ಹೋದ ಭಾರತೀಯರನ್ನು ಕೂಡಾ ಆಯಾ ರಾಷ್ಟ್ರಗಳು ಏರ್ ಲಿಫ್ಟ್ ಮಾಡಿದ್ದು, ಕತಾರ್ ಗೆ ಕರೆದುಕೊಂಡು ಬಂದಿತ್ತು.
ಇದೀಗ ಕತಾರ್ ನಿಂದ ದೆಹಲಿಗೆ ಆಗಮಿಸಿದ್ದ ಭಾರತೀಯರನ್ನು ಇದೀಗ ದೆಹಲಿಗೆ ಕರೆದುಕೊಂಡು ಬರಲಾಗಿದ್ದು, ದೆಹಲಿಯಿಂದ ತಮ್ಮ ತಮ್ಮ ಊರಿಗೆ ಅವರು ತೆರಳಿದ್ದಾರೆ. ಈ ಪೈಕಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 5 ಮಂದಿ ಸೋಮವಾರ ರಾತ್ರಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ. ಈ ಬಗ್ಗೆ ಅನೇಕರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು, ಅಮೆರಿಕಾ ಸೇನೆಯ ಕ್ಯಾಂಪ್ ಒಳಗೆ ನಾವು ಕೆಲಸ ಮಾಡುತ್ತಿದ್ದ ಕಾರಣ ಹೊರಪ್ರಪಂಚದಲ್ಲಿ ಏನಾಗುತ್ತಿದೆ ಅನ್ನುವುದು ಗೊತ್ತಿರಲಿಲ್ಲ. ಅಮೇರಿಕಾ ಸೇನೆ ಅಫ್ಘಾನ್ ನಿಂದ ಹಿಂದಕ್ಕೆ ಹೋಗುತ್ತಿದೆ ಎಂದಷ್ಟೇ ನಮಗೆ ಗೊತ್ತಾಗಿತ್ತು ಅಂದಿದ್ದಾರೆ. ಜೊತೆಗೆ ನಾವು ಬೇರೆ ಬೇರೆ ಕಂಪನಿಗಳ ಮೂಲಕ ಕೆಲಸದ ಸಲುವಾಗಿ ಅಫ್ಘಾನ್ ಗೆ ತೆರಳಿದ್ದರೂ, ಭಾರತೀಯ ರಾಯಭಾರಿ ಕಚೇರಿ ನಮ್ಮ ರಕ್ಷಣೆಯ ಹೊಣೆ ಹೊತ್ತುಕೊಂಡಿತ್ತು ಅಂದಿದ್ದಾರೆ.

Discussion about this post