ಕಳೆದ ತಿಂಗಳು ಜುಲೈ 18 ರಂದು ನಿವೃತ ಪಿಎಸ್ಐ ವಿಶ್ವನಾಥ್ ಸ್ವಾಂದೇನಹಳ್ಳಿಯ ತನ್ನ ನಿವಾಸದಲ್ಲಿ ಮೃತಪಟ್ಟಿದ್ದಾರೆ. ಈ ವೇಳೆ ಪತ್ನಿ ಜೊತೆಗಿದ್ದರು. ಆದರೆ ಅಂತ್ಯ ಸಂಸ್ಕಾರಕ್ಕೆ ಸಿದ್ದತೆ ಮಾಡುವ ಹೊತ್ತಿನಲ್ಲಿ ಮೊದಲ ಪತ್ನಿಯ ಮಕ್ಕಳು ಹಾಗೂ ಎರಡನೇ ಪತ್ನಿ ಹಾಗೂ ಮಕ್ಕಳು ಎಂಟ್ರಿ ಹೊಡೆದಿದ್ದಾರೆ. ಅರೇ ಇದೇನಿದು ಗಾಬರಿಗೊಳ್ಳುವ ಸರದಿ ಸ್ಥಳೀಯರದ್ದಾಗಿತ್ತು.
ಆದರೆ ಅವೆಲ್ಲಾ ಆಮೇಲೆ ನೋಡಿಕೊಳ್ಳೋಣ ಮೊದಲು ಕಾರ್ಯ ಮುಗಿಸೋಣ ಎಂದು ಅಂತ್ಯ ಸಂಸ್ಕಾರ ಮುಗಿಸಿದ್ದಾರೆ.
ಇದೀಗ ಮೃತ ಪಿಎಸ್ಐ ಒಂದಲ್ಲ ಎರಡಲ್ಲ ಐದು ಮದುವೆಯಾಗಿರುವುದು ಗೊತ್ತಾಗಿದೆ. ಆಸ್ತಿಗಾಗಿ ಪತ್ನಿಯರು ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ಪಂಚ ಮದುವೆಯ ರಹಸ್ಯ ಹೊರ ಬಿದ್ದಿದೆ.
ವಿಶೇಷ ಅಂದರೆ 58ನೇ ವಯಸ್ಸಿನಲ್ಲೂ 22 ವರ್ಷದ ಯುವತಿಯೊಬ್ಬರನ್ನು ಪೊಲೀಸ್ ಮದುವೆಯಾಗಿದ್ದರು. ಅವರೇ ಕೊನೆ ಘಳಿಗೆಯಲ್ಲಿ ಜೊತೆಗಿದ್ದವರು.
ಇದನ್ನೂ ಓದಿ : ಮ್ಯಾಟ್ರಿಮೋನಿಯಲ್ ಸೈಟ್ ನಲ್ಲಿ ಗಿಫ್ಟ್ ಹೆಸರಲ್ಲಿ ಮಹಿಳೆಯರಿಗೆ ದೋಖಾ..
ಈಗ ಐವರಲ್ಲಿ ಮೂವರು ಪತ್ನಿಯರ ಆಸ್ತಿಗಾಗಿ ಜಗಳ ಶುರುವಿಟ್ಟುಕೊಂಡಿದ್ದಾರೆ. ಇನ್ನುಳಿದ ಇಬ್ಬರು ಪತ್ನಿಯರು ಈ ಜಂಜಾಟ ಬೇಡ ಎಂದು ದೂರ ಉಳಿದಿದ್ದಾರೆ.
ಇದನ್ನೂ ಓದಿ : ಹೇಗಿದ್ದಾನೆ ಕುರಿಗಾಹಿ ಸಿಂಗರ್ ಹನುಮಂತಪ್ಪ ಬಟ್ಟೂರು….
ಪ್ರಕರಣ ಇದೀಗ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಅಂಗಳದಲ್ಲಿದೆ. ಒಟ್ಟಿನಲ್ಲಿ ಹೋದಲೆಲ್ಲಾ ಠಾಣೆಗೊಂದರಂತೆ ಮದುವೆಯಾದ ವಿಶ್ವನಾಥ್, ಪತ್ನಿಯರನ್ನು ಸಂಕಷ್ಟದಲ್ಲಿ ಸಿಲುಕಿಸಿರುವುದು ವಿಪರ್ಯಾಸ.