ಅತ್ತ ಉತ್ತರ ಕರ್ನಾಟಕದಲ್ಲಿ ಜಲ ಪ್ರಳಯವಾಗಿದೆ. ಇತ್ತ ದಕ್ಷಿಣ ಕನ್ನಡದಲ್ಲೂ ಮಳೆಯ ಅಬ್ಬರ ಜೋರಾಗಿದೆ. ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮರುಣನ ಅಬ್ಬರ ಜೋರಾಗಿದೆ.
ಅದರಲ್ಲೂ ನದಿ ಭಾಗಕ್ಕೆ ತಾಗಿಕೊಂಡಿರುವ ಪ್ರದೇಶಕ್ಕೆ ಸಾಕಷ್ಟು ತೊಂದರೆಯಾಗಿದ್ದು, ಬಂಟ್ವಾಳ ಸಮೀಪದ ಪ್ರದೇಶ ಮುಳುಗಡೆಯಾಗಿದೆ.
ಹಲವು ಮನೆಗಳಿಗೆ ಶುಕ್ರವಾರ ರಾತ್ರಿಯೇ ನೀರು ನುಗ್ಗಿದ್ದು, ವಾಹನಗಳು ನೀರಿನಲ್ಲಿ ಮುಳುಗಿ ಹೋಗಿವೆ.ನೇತ್ರಾವತಿ ನದಿ ದಡದಲ್ಲಿ ಇರುವ ನಿವಾಸಿಗಳಿಗೆ ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ.
ಈ ನಡುವೆ ಬಂಟ್ವಾಳ ಪೇಟೆಗೆ ನೀರು ನುಗ್ಗಿರುವುದರಿಂದ ಬಿ.ಸಿ.ರೋಡ್ ಬಳಿಯ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಮನೆಗೆ ಜಲ ದಿಗ್ಬಂಧನವಾಗಿದೆ.ಹೀಗಾಗಿ ಅವರ ಕುಟುಂಬವನ್ನು ರಕ್ಷಣೆ ಮಾಡಿ ಬೋಟ್ ಮೂಲಕ ಸುರಕ್ಷಿತ ಪ್ರದೇಶಕ್ಕೆ ಕರೆತರಲಾಗಿದೆ.
Discussion about this post