ಮಾಜಿ ಸಿಎಂ ಕುಮಾರಸ್ವಾಮಿ ಕಾಡುತ್ತಿರುವ ಅನಾರೋಗ್ಯವನ್ನು ಲೆಕ್ಕಿಸದೇ ಪ್ರವಾಹ ಪೀಡಿತ ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಪ್ರವಾಸ ಪ್ರಾರಂಭಿಸಿದ್ದಾರೆ.
ಶನಿವಾರ ಅನಾರೋಗ್ಯದ ಕಾರಣದಿಂದ ಆ ಜಿಲ್ಲೆಗಳಿಗೆ ಹೋಗಲಾಗುತ್ತಿಲ್ಲ ಎಂದು ಟ್ವೀಟ್ ಮಾಡಿದ ಬೆನ್ನಲ್ಲೇ ನೆಟ್ಟಿಗರು ತಿರುಗಿ ಬಿದ್ದಿದ್ದರು. ಹೀಗಾಗಿ ತಕ್ಷಣ ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡ ಕುಮಾರಸ್ವಾಮಿ ಶನಿವಾರ ತುರ್ತಾಗಿ ಪ್ರವಾಸ ಕೈಗೊಳ್ಳುವ ನಿರ್ಧಾರ ಕೈಗೊಂಡರು.
ಹೀಗಾಗಿ ಇಂದು ಹೆಲಿಕಾಫ್ಟರ್ ಹತ್ತಿದ ಕುಮಾರಸ್ವಾಮಿ ಬೆಳಗಾವಿ,ಸಂಕೇಶ್ವರ, ಚಿಕ್ಕೋಡಿ, ಹುಬ್ಬಳ್ಳಿ,ನವಲಗುಂದ, ಗದಗದ ನರಗುಂದ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.ಸಂಜೆ ಹುಬ್ಬಳ್ಳಿಯಿಂದ ವಿಶೇಷ ವಿಮಾನ ಮೂಲಕ ಅವರು ಮೈಸೂರಿಗೆ ಬಂದಿಳಿಯಲಿದ್ದಾರೆ.
ಈ ನಡುವೆ ಬೆಳಗಾವಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಸಂತ್ರಸ್ಥ ಪೀಡಿತ ಜನರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಪಕ್ಷದ ವತಿಯಿಂದ ಎಲ್ಲಾ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಜೊತೆಗೆ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಯಾವುದೇ ಟೀಕೆ ಮಾಡುವುದಿಲ್ಲ. ರಾಜಕೀಯವೂ ಮಾಡುವುದಿಲ್ಲ. ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಕೃತಿ ವಿಕೋಪವನ್ನು ನಿಯಂತ್ರಿಸುವುದು ಯಾರ ಕೈಯಲ್ಲೂ ಇಲ್ಲ. ಹೀಗಾಗಿ ಸರ್ಕಾರದ ಜೊತೆಗೆ ಪರಿಹಾರ ಕಾರ್ಯದಲ್ಲಿ ನಾವು ಕೈ ಜೋಡಿಸುತ್ತೇವೆ ಅನ್ನುವ ಮೂಲಕ ಮುತ್ಸದಿತನ ಮೆರೆದಿದ್ದಾರೆ.
Get upto 50% off on Baby Products
ಕೆಲ ದಿನಗಳ ಹಿಂದಷ್ಟೇ ಸಿಎಂ ಯಡಿಯೂರಪ್ಪ ವಿರುದ್ಧ ತಿರುಗಿ ಬಿದ್ದಿದ್ದ ಕುಮಾರಸ್ವಾಮಿ, ಯಡಿಯೂರಪ್ಪ ಎಲ್ಲಿದ್ದೀಯಪ್ಪ ಎಂದು ಕೇಳುವಂತಾಗಿದೆ ಎಂದು ಹೇಳಿದ್ದರು. ಆದರೆ ಇದೀಗ ವಾಸ್ತವ ಪರಿಸ್ತಿತಿಯ ಅವಲೋಕನದ ಬಳಿಕ ರಾಜಕೀಯವನ್ನು ಬದಿಗೊತ್ತಿ ಜನರ ಸಂಕಷ್ಟಕ್ಕೆ ಕುಮಾರಸ್ವಾಮಿ ಸ್ಪಂದಿಸಿದ್ದಾರೆ.
Discussion about this post