ರಾಜ್ಯ ರಾಜಕೀಯ ಕ್ಷಣ ಕ್ಷಣಕ್ಕೂ ಬದಲಾವಣೆಗಳ ಪರ್ವ ಪ್ರಾರಂಭವಾಗಿದೆ. ಮೂರು ಪಕ್ಷಗಳಲ್ಲೂ ಸಿಕ್ಕಾಪಟ್ಟೆ ಚಟುವಟಿಕೆಗಳು ನಡೆಯುತ್ತಿದ್ದು, ಎಲ್ಲಿ ಏನಾಗುತ್ತಿದೆ ಅನ್ನುವುದೇ ಗೊಂದಲ.
ಈ ನಡುವೆ ಜೆಡಿಎಸ್ ಪಕ್ಷದಲ್ಲೂ ಭಿನ್ನಮತದ ಬಾವುಟ ಹಾರಲಾರಂಭಿಸಿದ್ದು, ತಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿರುವ ಕೆಲ ಶಾಸಕರು ದಳಪತಿಗಳಿಗೆ ಶಾಕ್ ಕೊಡಲು ಮುಂದಾಗಿದ್ದಾರೆ.
ಅದರಲ್ಲೂ ವಿಧಾನಪರಿಷತ್ ಸದಸ್ಯರು ಇದೀಗ ದಳಪತಿಗಳ ವಿರುದ್ಧ ಆಕ್ರೋಶ ಹೊರ ಹಾಕಲಾರಂಭಿಸಿದ್ದು, ರೆಸಾರ್ಟ್ ರಾಜಕೀಯಕ್ಕೆ ಸಿದ್ದತೆ ನಡೆಸಿದ್ದಾರೆ. ಆದರೆ ಇದಕ್ಕೆ ಕ್ಯಾರೆ ಅನ್ನದ ಮಾಜಿ ಸಿಎಂ ಕುಮಾರಸ್ವಾಮಿ ವಿದೇಶಕ್ಕೆ ಹಾರಲು ಸಿದ್ದತೆ ನಡೆಸಿದ್ದಾರೆ.
ಪುತ್ರ ನಿಖಿಲ್ ಕುಮಾರಸ್ವಾಮಿ ಚಿತ್ರದ ಕುರಿತಂತೆ ಚರ್ಚೆ ನಡೆಸುವ ಸಲುವಾಗಿ ಪುತ್ರ, ಪತ್ನಿ ಜೊತೆ ಲಂಡನ್ ಪ್ರವಾಸ ಕೈಗೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಕುಮಾರಸ್ವಾಮಿ ಮೇಲೆ ಅಸಮಾಧಾನಗೊಂಡಿರುವ ಜೆಡಿಎಸ್ ಪರಿಷತ್ ಸದಸ್ಯರು ಸಭೆ ಮೇಲೆ ಸಭೆ ನಡೆಸಿ ತಮ್ಮ ಸಿಟ್ಟನ್ನು ಹೊರ ಹಾಕುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಪರಿಷತ್ ಸದಸ್ಯರ ಅಸಮಾಧಾನ ಶಮನ ಮಾಡಲು ಜೆಡಿಎಸ್ ವರಿಷ್ಠ ದೇವೇಗೌಡ ಮುಂದಾಗಿದ್ದಾರೆ.
ಇದೇ ತಿಂಗಳ 6ರಂದು ದೇವೇಗೌಡರು ಕುಮಾರಸ್ವಾಮಿ ಮತ್ತು ರೇವಣ್ಣ ಜೊತೆ ಸಭೆ ನಿಗದಿ ಮಾಡಿದ್ದರು. ಆದರೆ ಇದೇ ಸಮಯಕ್ಕೆ ಹೆಚ್ಡಿಕೆ ಲಂಡನ್ ಗೆ ಹೊರಟು ನಿಂತಿದ್ದಾರೆ.
ಅಲ್ಲಿಗೆ ವಿಧಾನ ಪರಿಷತ್ ಸದಸ್ಯರ ಅಸಮಾಧಾನಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಡೋಂಟ್ ಕೇರ್ ಅಂದಿರೋದು ಪಕ್ಕಾ ಆಗಿದೆ.
Discussion about this post