ಬಿಜೆಪಿ… ಬಿಜೆಪಿ ಎಂದು ಜಪಿಸಿದ ಯುವ ಕಾರ್ಯಕರ್ತರಿಗೆ ಈಶ್ವರಪ್ಪ (Eshwarappa) ಸರಿಯಾದ ಬಹುಮಾನ ಕೊಟ್ಟಿದ್ದಾರೆ. ರಾಜೀನಾಮೆ ಕೊಟ್ರೆ ಹೊಸಬರು ಬರ್ತಾರೆ ಅನ್ನುವ ಮೂಲಕ ತಳಮಟ್ಟದ ಕಾರ್ಯಕರ್ತರನ್ನೇ ತುಳಿಯುವ ಮಾತುಗಳನ್ನಾಡಿದ್ದಾರೆ..
ಶಿವಮೊಗ್ಗ : ಬಿಜೆಪಿಯ ಹಿರಿಯ ನಾಯಕರು ಎಂದು ಕರೆಸಿಕೊಂಡವರ ಅಸಲಿ ಮುಖ ಇದೀಗ ಬಯಲಾಗುತ್ತಿದೆ. ಕಾರ್ಯಕರ್ತರು ಬರೀ ಬಾವುಟ – ಬ್ಯಾನರ್ ಕಟ್ಟಲು, ಕರ ಪತ್ರ ಹಂಚಲು ಸೀಮಿತ ಅನ್ನುವ ಸತ್ಯ ಗೊತ್ತಾಗುತ್ತಿದೆ. ಶಿವಮೊಗ್ಗ ಹರ್ಷನ ಕೊಲೆಯ ಬಳಿಕ ಬಿಜೆಪಿ ನಾಯಕರ ವರ್ತನೆ ಗಮನಿಸಿದ್ರೆ ಕಾರ್ಯಕರ್ತರನ್ನು ಹೇಗೆ ನಿರ್ಲಕ್ಷ್ಯ ಮಾಡಲಾಗುತ್ತಿತ್ತು ಅನ್ನುವುದು ಗೊತ್ತಾಗಿದೆ. ಪ್ರವೀಣ್ ನೆಟ್ಟಾರು ಹತ್ಯೆಯ ಹೊತ್ತಿಗೆ ನಾಯಕರ ನಿಲುವು ಸ್ಪಷ್ಟವಾಗಿದೆ.(Eshwarappa)
ಕರಾವಳಿಯಂತಹ ಕಟ್ಟರ್ ಹಿಂದುತ್ವ ನೆಲದಲ್ಲೇ ಬಿಜೆಪಿ ಕಾರ್ಯಕರ್ತರನ್ನೇ ನಾಯಕರು ನಿರ್ಲಕ್ಷ್ಯ ಮಾಡಿದ್ರು ಅಂದ್ರೆ ಉಳಿದ ಕಡೆ ಹೇಗಿರಬಹುದು. ಈ ತನಕ ಬಿಜೆಪಿಗಾಗಿ ಪ್ರಾಣ ತೆತ್ತವರ ಕುಟುಂಬ ಹೇಗಿದೆ ಅನ್ನುವುದನ್ನು ನೋಡಿಕೊಂಡು ಬಂದರೆ ಸತ್ಯ ಅರ್ಥವಾಗುತ್ತದೆ. ಇನ್ನು ಇದಕ್ಕೆ ಪೂರಕ ಅನ್ನುವ ಸಾಕ್ಷಿಯನ್ನು ಮಾಡಿ ಸಚಿವ ಈಶ್ವರಪ್ಪ (Eshwarappa) ಕೊಟ್ಟಿದ್ದಾರೆ.
ಇದನ್ನು ಓದಿ : Vinay guruji : ಟ್ರೋಲ್ ಪೇಜ್ ಗಳ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ ವಿನಯ್ ಗುರೂಜಿ
ಪಕ್ಷದ ನಾಯಕರ ವರ್ತನೆಯನ್ನು ಖಂಡಿಸಿ ರಾಜೀನಾಮೆ ಕೊಟ್ಟ ಕಾರ್ಯಕರ್ತರಿಗೆ ಉತ್ತರಿಸಬೇಕಾಗಿದ್ದ ಈಶ್ವರಪ್ಪ,(Eshwarappa) ಯುವ ಮೋರ್ಚಾ ಕಾರ್ಯಕರ್ತರು ಈಗಷ್ಟೇ ಕಣ್ಣು ಬಿಡುತ್ತಿದ್ದಾರೆ. ಆಗಲೇ ನಾನು ರಾಜೀನಾಮೆ ಕೊಡುತ್ತೇನೆ ಅಂತಾರೆ. ಯುವ ಮೋರ್ಚಾ ಯುವಕರು ಪಕ್ಷಕ್ಕೆ ನೀಡಿದ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ.
ರಾಜೀನಾಮೆ ಕೊಡುವುದು ಹಿಂದೂ ಸಂಘಟನೆಗೆ ಮಾಡುವ ಅವಮಾನ, ರಾಜೀನಾಮೆ ಉತ್ತರವಲ್ಲ. ರಾಜೀನಾಮೆ ಕೊಟ್ಟಿದ್ದನ್ನು ಒಪ್ಪಿಕೊಂಡರೆ ಬಿಜೆಪಿಗೆ ಹೊಸ ಕಾರ್ಯಕರ್ತ ಬರ್ತಾನೆ, ನೀನು ಎಲ್ಲಿಗೆ ಹೋಗ್ತೀಯಾ?. ನಮ್ಮ ಕಾರ್ಯಕರ್ತರಿಗೆ ಪ್ರಬುದ್ಧತೆ ಕಡಿಮೆ ಇದೆ ಅನ್ನುವ ಮೂಲಕ ಯುವ ಕಾರ್ಯಕರ್ತರನ್ನು ಈಶ್ವರಪ್ಪ ನೇರವಾಗಿ ಅವಮಾನಿಸಿದ್ದಾರೆ.
Discussion about this post