ಭ್ರಷ್ಟಚಾರದ ಆರೋಪ ಹೊತ್ತಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಇದೀಗ ಎಲ್ಲವನ್ನೂ ಕಕ್ಕಬೇಕಾದ ಕಾಲ ಬಂದಿದೆ. ದಿನದ 12 ಗಂಟೆ ದುಡಿಯುವ ಅದೆಷ್ಟೋ ಮಂದಿ ಶ್ರೀಮಂತರಾಗುವುದು ಬಿಡಿ ಒಂದು ದಿನ ಕೆಲಸಕ್ಕೆ ಹೋಗದಿದ್ದರೆ ಮುಂದೇನು ಎಂದು ಆತಂಕ ಪಡುತ್ತಾರೆ.
ಆದರೆ ಈ ಡಿಕೆಶಿ ಮಾತ್ರ ವರ್ಷದಿಂದ ವರ್ಷಕ್ಕೆ ಕೋಟಿ ಕೋಟಿ ಲೆಕ್ಕದಲ್ಲಿ ಆಸ್ತಿ ಏರಿಸಿಕೊಂಡಿದ್ದಾರೆ. ಅದು ತನ್ನ ಹೆಸರಿನಲ್ಲಿ ಮಾತ್ರವಲ್ಲ, ವ್ಯವಹಾರ ಕುರಿತಂತೆ ಅಷ್ಟೇನೂ ತಿಳುವಳಿಕೆ ಇಲ್ಲದ ತಾಯಿ, ಇನ್ನೂ ಕಲಿಯುತ್ತಿರುವ ಮಗಳ ಹೆಸರಿನಲ್ಲಿ ಕೋಟಿ ಕೋಟಿ ಆಸ್ತಿ ಮಾಡಿಟ್ಟಿದ್ದಾರೆ ಅಂದ್ರೆ ಇದು ಸಕ್ರಮ ಗಳಿಕೆ ಎಂದು ನಂಬುವುದು ಕಷ್ಟ.
ಹೀಗಾಗಿಯೇ ಅಕ್ರಮ ವಾಸನೆಯ ಜಾಡು ಹಿಡಿದು ಬಂದಿರುವ ಇಡಿ, ಸಿಬಿಐ, ಐಟಿ ಇಲಾಖೆ ವರ್ಷದಿಂದ ವರ್ಷಕ್ಕೆ ಶ್ರೀಮಂತರಾಗ್ತ ಹೋಗುವುದು ಹೇಗೆ ಅನ್ನುವ ಕುರಿತಂತೆ ಅಧ್ಯಯನ ಪ್ರಾರಂಭಿಸಿದೆ. ಡಿಕೆಶಿ ಶ್ರೀಮಂತರಾದ ಬಗೆಯನ್ನು ತಿಳಿಯುವ ಪ್ರಯತ್ನ ಪ್ರಾರಂಭಿಸಿದೆ.
ಈರ್ ಹಿನ್ನಲೆಯಲ್ಲಿ ಡಿಕೆಶಿಯನ್ನು ವಿಚಾರಣೆಗೆ ಒಳಪಡಿಸಿರುವ ಇಡಿ, ಅವರ ಆಪ್ತರಾದ ಸಚಿನ್ ನಾರಾಯಣ್ ಅಂಜನೇಯ, ಶರ್ಮಾ ಟ್ರಾವೆಲ್ಸ್ ಮಾಲೀಕರನ್ನು ಕರೆಸಿ ವಿವರ ಪಡೆಯುತ್ತಿದೆ. ಈ ವೇಳೆ ಮಗಳು ಐಶ್ವರ್ಯ ಹೆಸರಿನಲ್ಲಿ ಕೋಟಿ ಕೋಟ
ಮೊತ್ತದ ಹಣ, ಆಸ್ತಿ ಇರುವುದು ಇಡಿಯವರ ಸಂಶಯಕ್ಕೆ ಕಾರಣವಾಗಿದೆ. ಹೀಗಾಗಿ ಐಶ್ವರ್ಯ ಹೆಸರಿನಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಹಣ ಹೇಗೆ ಬಂತು ಅನ್ನುವುದನ್ನು ತಿಳಿಯಲು ಇಡಿ ಅಧಿಕಾರಿಗಳು ಬಯಸಿದ್ದಾರೆ.
ಗಿಫ್ಟ್ ಡೀಡ್, ಅಜ್ಜಿ ಖಾತೆಯಿಂದ ಹಣ ವರ್ಗಾವಣೆ ಹೀಗೆ ಹಲವು ವಿಚಾರಗಳ ಕುರಿತಂತೆ ಐಶ್ವರ್ಯ ಅವರಿಂದಲೇ ವಿವರ ಪಡೆಯಲು ಬಯಸಿರುವ ಇಡಿ ಅಧಿಕಾರಿಗಳು, ಡಿಕೆಶಿ ಮನೆಗೆ ತೆರಳಿ ಸಮನ್ಸ್ ನೀಡಿದ್ದಾರೆ. ಸಪ್ಟೆಂಬರ್ 12 ರಂದು ಐಶ್ವರ್ಯ ಇಡಿ ಅಧಿಕಾರಿಗಳ ಮುಂದೆ ಹಾಜರಾಗಬೇಕಾಗಿದ್ದು, ತನ್ನ ಆಸ್ತಿ ಪಾಸ್ತಿಯ ಕುರಿತಂತೆ ವಿವರ ಸಲ್ಲಿಸಬೇಕಾಗಿದೆ.
ಸಪ್ಟೆಂಬರ್ 13ರ ತನಕ ಡಿಕೆಶಿಯವರನ್ನು ನ್ಯಾಯಾಲಯ ಇಡಿ ವಶಕ್ಕೆ ಒಪ್ಪಿಸಿತ್ತು. ಅಂದೇ ಅವರನ್ನು ಇಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
Get upto 80% off on Health and Grooming Accessories
ಪರಿಸ್ಥಿತಿ ನೋಡಿದರೆ ಅಜ್ಜಿ ಆಸ್ತಿ ಮೊಮ್ಮಗಳಿಗೆ ಮುಳುವಾಗುವ ಸಾಧ್ಯತೆಗಳಿದೆ. 12ಕ್ಕೆ ಐಶ್ವರ್ಯ ವಿಚಾರಣೆ, 13 ರಂದು ಡಿಕೆಶಿ ಕೋರ್ಟ್ ಗೆ ಹಾಜರು ಅಂದರೆ ತಲೆಗೆ ಬಿದ್ದ ನೀರು ಪಾದ ತಲುಪುವುದು ಖಚಿತ ಎಂದಾಯ್ತು.
Discussion about this post