ಕೇರಳದಿಂದ ಕೊಡಗಿಗೆ ಬಂದು ಟಿಂಬರ್ ಕೆಲಸ ಮಾಡಿಕೊಂಡಿದ್ದ ಜಾರ್ಜ್ ಬಳಿಕ ರಾಜಕಾರಣ ಮಾಡಿ ಸಿಕ್ಕಾಪಟ್ಟೆ ಆಸ್ತಿ ಸಂಪಾದಿಸಿದ್ದಾರೆ. ತಮ್ಮ ಪುತ್ರನ ಹೆಸರಿನಲ್ಲಿ ಬೇನಾಮಿ ಆಸ್ತಿ ಸಂಪಾದಿಸಿದ್ದಾರೆ. ಮಗಳ ಹೆಸರಿನಲ್ಲಿ ಅಮೆರಿಕದಲ್ಲಿ ಆಸ್ತಿ ಮಾಡಿದ್ದಾರೆ. ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸುವ ಸಂದರ್ಭದಲ್ಲಿ ಆಸ್ಟ್ರೇಲಿಯಾದಲ್ಲಿ ಆಸ್ತಿ ಇದೆ ಎಂದು ತೋರಿಸಿದ್ದಾರೆ. ಚುನಾವಣೆಗೆ ಸ್ಪರ್ಧಿಸುವಾಗ ಈ ಆಸ್ತಿಗಳನ್ನು ಮುಚ್ಚಿಟ್ಟಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ರವಿಕೃಷ್ಣ ರೆಡ್ಡಿ ಜಾರ್ಜ್ ವಿರುದ್ಧ ಇಡಿ ಬಾಗಿಲು ತಟ್ಟಿದ್ದರು.
ಜಾರ್ಜ್ ಅವರ ಮಗಳು ರೇನಿತಾ ಅಬ್ರಹಾಂ ಮತ್ತು ಅಳಿಯ ಕೆವಿನ್ ಅಬ್ರಹಾಂ ನ್ಯೂಯಾರ್ಕಿನಲ್ಲಿದ್ದು, ಅಮೆರಿಕದ ನ್ಯೂಯಾರ್ಕಿನಲ್ಲಿ ಜಾರ್ಜ್ ಆಸ್ತಿ ಹೊಂದಿದ್ದಾರೆ. ಈ ಆಸ್ತಿಗಳ ಮೌಲ್ಯ ಕೋಟಿ ಕೋಟಿ ಬೆಲೆ ಬಾಳುತ್ತದೆ ಎಂದು ರವಿಕೃಷ್ಣಾ ರೆಡ್ಡಿ ಇಡಿಗೆ ದೂರು ಸಲ್ಲಿಸಿದ್ದರು.
ಇದೀಗ ದೂರಿಗೆ ಜೀವ ಬಂದಿದ್ದು, ಜಾರ್ಜ್ ವಿರುದ್ಧ ತನಿಖೆ ನಡೆಸಲು ಮುಂದಾಗಿದೆ. ದೂರಿನ ಹಿನ್ನಲೆಯಲ್ಲಿ ಕೆಜೆ ಜಾರ್ಜ್ ವಿರುದ್ಧ ಜಾರಿ ನಿರ್ದೇಶನಾಲಯ(ಇಡಿ) ತನಿಖೆ ಆರಂಭಿಸಿದೆ.
ಫೇಮಾ ಕಾಯ್ದೆಯಡಿಲ್ಲಿ ಇಡಿ ಪ್ರಕರಣ ದಾಖಲಿಸಿದ್ದು, ಲೋಕಾಯುಕ್ತದಲ್ಲಿ ಜಾರ್ಜ್ ಘೋಷಿಸಿಕೊಂಡಿರುವ ಆಸ್ತಿ ವಿವರಗಳನ್ನು ಇಡಿ ಈಗಾಗಲೇ ಪಡೆದುಕೊಂಡಿದೆ. ಜೊತೆಗೆ ಇನ್ನಷ್ಟು ಮಾಹಿತಿಗಳಿಗಾಗಿ ಲೋಕಾಯುಕ್ತಕ್ಕೆ ಇಡಿ ಪತ್ರವನ್ನೂ ಕೂಡಾ ಬರೆದಿದೆ.
Discussion about this post