ಬೆಂಗಳೂರು : ಬೆಂಗಳೂರಿನ ಬೆ.ಮ.ಸಾ.ಸಂಸ್ಥೆ ಘಟಕ 37 ಕೆಂಗೇರಿಯಲ್ಲಿ ರಾಜ್ಯದ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಮೊದಲ ವಿದ್ಯುತ್ ಬಸ್ ಗೆ ಚಾಲನೆ ನೀಡಲಾಗಿದೆ. ಸಾರಿಗೆ ಸಚಿವ SriRamulu ಈ ಬಸ್ ಗೆ ಚಾಲನೆ ನೀಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ವಿದ್ಯುತ್ ಚಾಲಿತ ಬಸ್ ಗಳು ರಸ್ತೆಗಿಳಿಯಲಿದೆ.
ಈ ವೇಳೆ ಮಾತನಾಡಿದ ಶ್ರೀರಾಮುಲು, ಸರ್ವರಿಗೂ ಸಾರಿಗೆ ದೊರೆಯುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ.ಜೊತೆಗೆ ಎಲೆಕ್ಟ್ರಿಕಲ್ ಸಾರಿಗೆ ವಾಹನಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಎಲೆಕ್ಟ್ರಿಕಲ್ ವಾಹನಗಳಿಂದ ಪ್ರಕೃತಿಗೆ ಅನುಕೂಲವಾಗಲಿದೆ. ಎಲ್ಲರೂ ಸಾರಿಗೆ ಇಲಾಖೆಯ ವಾಹನಗಳ ಸದಪಯೋಗ ಪಡೆಯುವ ಮೂಲಕ ಸಂಚಾರ ದಟ್ಟಣೆಗೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಎಂಟಿಸಿ ನಿಗಮದ ಅಧ್ಯಕ್ಷರಾದ ಶ್ರೀ ಎನ್.ಎಸ್. ನಂದೀಶ್ ರೆಡ್ಡಿ ಸೇರಿದಂತೆ ಇಲಾಖೆಯ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
Besides Kengeri depot, e-bus services will be operated from the Yeshwantpur depot as well as the KR Puram depot of the BMTC.
Discussion about this post