ದುನಿಯಾ ವಿಜಿಗೆ ಸಂಕಷ್ಟಗಳ ಸರಮಾಲೆ ಶುರುವಾಗಿದೆ.ಪಾಪದ ಕೊಡ ತುಂಬಿದಾಗ ಹೀಗಾಗುತ್ತದೆ ಅನ್ನುವಂತೆ ಒಂದಲ್ಲ ಒಂದು ತೊಂದರೆಗಳು ಶುರುವಾಗಿವೆ. ಶನಿವಾರ ರಾತ್ರಿ ಮಾರುತಿ ಗೌಡ ಎಂಬವರ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಬಂಧನಕ್ಕೆ ಒಳಗಾದ ಬೆನ್ನಲ್ಲೇ ದುನಿಯಾ ವಿಜಿಯ ಎರಡನೇ ಹೆಂಡ್ತಿ ಮೇಲೆ ಪೊಲೀಸ್ ಕೇಸು ಬಿದ್ದಿದೆ.
ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ಗಿರಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು,. ನನ್ನ ಮೂವರು ಮಕ್ಕಳನ್ನ ನನ್ನಿಂದ ದೂರ ಮಾಡಿ ಹಾಳು ಮಾಡುತ್ತಿದ್ದಾರೆ. ನನ್ನ ಮಗ ಹೇಗಿದ್ದಾನೆ ಅಂತಾ ನೋಡಲು ಹೋದಾಗ, 2ನೇ ಪತ್ನಿ ಕೀರ್ತಿ ನನ್ನ ಮೇಲೆ ಹಲ್ಲೆ ನಡೆಸಿದ್ದಾಳೆ. ಗೂಂಡಾಗಳನ್ನ ಬಿಟ್ಟು ಬೆದರಿಸಿದ್ದಾರೆ. ನನಗೆ ನ್ಯಾಯ ಬೇಕು, ಮಕ್ಕಳು ಬೇಕು ಎಂದು ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಾಗರತ್ನ ಅವರ ದೂರಿನ ಆಧಾರದ ಮೇಲೆ ಕೀರ್ತಿ ವಿರುದ್ಧ ಪೊಲೀಸರು 323, 504 ,506 34 ಸೆಕ್ಷನ್ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಜೊತೆಗೆ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡು ಕೀರ್ತಿಯನ್ನು ಕಳಿಸಿಕೊಟ್ಟಿದ್ದಾರೆ.
ಹಲ್ಲೆ, ಬೆದರಿಕೆ ಆರೋಪದಡಿ ಕೇಸ್ ಫೈಲ್ ಆಗಿದೆ.ಇದೇ ವೇಳೆ ವೇಳೆ ನಾಗರತ್ನ ಅವರೇ ನನ್ನ ಮೇಲೆ ಹಲ್ಲೆ ನಡೆಸಿದ್ರು ಅಂತಾ ಕೀರ್ತಿ ಆರೋಪಿಸಿದರು.
ಈ ಹಿಂದೆ ನಾಗರತ್ನ ಮತ್ತು ವಿಜಿ ನಡುವೆ ಬೀದಿಗೆ ಬಂದಿರುವುದನ್ನು ನೆನಪಿಸಿಕೊಳ್ಳಬಹುದು.