ಹಲ್ಲೆ ಆರೋಪದಲ್ಲಿ ಜೈಲು ಸೇರಿದ ದುನಿಯಾ ವಿಜಿ ಗಾಂಧಿ ಜಯಂತಿ ಮುನ್ನಾ ದಿನ ಬೇಲ್ ಪಡೆದು ಹೊರ ಬಂದಿದ್ದಾರೆ. ಜೈಲಿನಿಂದ ಹೊರ ಬಂದ ವಿಜಯ್ ನೇರವಾಗಿ ವಿವಿಧ ಧರ್ಮದ ಧಾರ್ಮಿಕ ಸ್ಥಳಗಳಿಗೆ ಭೇಟಿ ಕೊಟ್ಟು ಪ್ರಾರ್ಥನೆ ಸಲ್ಲಿಸಿದರು.
ಯಾರಿವನು ಪಾನಿಪೂರಿ ಕಿಟ್ಟಿ – ಬಾಡಿ ಬಿಲ್ಡರ್ ಗ್ಯಾಕೆ ಈ ಹೆಸರು…..
ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ದುನಿಯಾ ವಿಜಿ, ನಾನು ಜೈಲಿನಲ್ಲಿ ಇರುವಂತಾಗಲು ಪೊಲೀಸ್ ಅಧಿಕಾರಿಯೊಬ್ಬರು ಕಾರಣ, ನೇರವಾಗಿ ಅವರು ನನ್ನ ಮುಂದೆ ಕುಳಿತುಕೊಳ್ಳಲಿ, ವಿಚಾರಿಸಿಕೊಳ್ಳುತ್ತೇನೆ. ಯಾವುದಾದರೂ ವಾಹಿನಿಯಲ್ಲಿ ಕುಳಿತು ಚರ್ಚೆ ಮಾಡೋಣ, ಅವರೊಂದು ಕಡೆ ಮಾತನಾಡೋದು ನಾನೊಂದು ಕಡೆ ಮಾತನಾಡುವುದು ಬೇಕಾಗಿಲ್ಲ. ನಾನು ತಪ್ಪು ಮಾಡಿಲ್ಲ. ಹೀಗಾಗಿ ಅವರು ಚರ್ಚೆಗೆ ಬಂದರೆ ನಾನು ಚರ್ಚೆಗೆ ಸಿದ್ದ ಎಂದು ಸವಾಲು ಹಾಕಿದರು.
ಅನೈತಿಕ ಸಂಬಂಧ ಅಂತಾ ಹೇಳ್ತಾರೆ ಹೇಳಲಿ ತೊಂದರೆ ಇಲ್ಲ – ಕೀರ್ತಿಗೌಡ
ಇದೇ ವೇಳೆ ಮೊದಲ ಪತ್ನಿ ನಾಗರತ್ನ ಕುರಿತಂತೆ ಪ್ರತಿಕ್ರಿಯಿಸಿದ ದುನಿಯಾ ವಿಜಿ, ಎರಡೂವರೆ ವರ್ಷದಿಂದ ಸುಮ್ಮನಿದ್ದೇನೆ. ಮನೆಯ ವಿಷಯ ಹೊರಗಡೆ ಚರ್ಚೆಯಾಗಬಾರದು ಅನ್ನುವುದು ನನ್ನ ಆಶಯವಾಗಿತ್ತು, ಆದರೆ ನಾನು ಇಲ್ಲದ ವೇಳೆ ಮನೆಗೆ ನುಗ್ಗಿರುವ ನಾಗರತ್ನ ಕೀರ್ತಿ ಗೌಡ ಮೇಲೆ ಹಲ್ಲೆ ಮಾಡಿದ್ದಾಳೆ.
ವಿಜಿಗೆ ಸಂಕಷ್ಟ – ಎರಡನೇ ಹೆಂಡತಿಯ ಮೇಲೆ ಕೇಸು ಜಡಿದ ಮೊದಲ ಹೆಂಡ್ತಿ
ನನ್ನ ಮತ್ತು ಕೀರ್ತಿಯನ್ನು ಬೇರೆ ಮಾಡುವುದಾಗಿ ಹೇಳಿದ್ದಾಳೆ. ಆದರೆ ನನ್ನ ಮತ್ತು ಕೀರ್ತಿಗೌಡಳನ್ನು ಬೇರೆ ಮಾಡಲು ಸಾಧ್ಯವೇ ಇಲ್ಲ. ನಾಲ್ಕು ವರ್ಷದ ಹಿಂದೆ ನನ್ನ ಮಾನ ಹರಾಜು ಹಾಕಿದರು. ಇದೇ ಮತ್ತೆ ಮುಂದುವರಿದಿದೆ. ಎಲ್ಲವನ್ನೂ ಕಾನೂನು ರೀತಿಯಲ್ಲೇ ಎದುರಿಸುತ್ತೇನೆ ಎಂದರು.
[youtube https://www.youtube.com/watch?v=iiP9GmNPZFo&w=697&h=392]
Discussion about this post