ಬೆಂಗಳೂರು : ಪ್ರಸಕ್ತ ಸಾಲಿನ ಡಿಎಸ್ ಮ್ಯಾಕ್ಸ್ ಕಲಾಶ್ರೀ ನ್ಯಾಷನಲ್ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಪದ್ಮಶ್ರೀ ಪುರಸ್ಕೃತ ಸಾಹಿತಿ ಡಾ. ದೊಡ್ಡರಂಗೇಗೌಡ, ಡಾ. ಹಂಸಲೇಖ, ನಟ ದೇವರಾಜ್ ಸೇರಿದಂತೆ, 13 ಜನ ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಿ.ಎಸ್. ಮ್ಯಾಕ್ಸ್ ಸಂಸ್ಥೆ ಅಧ್ಯಕ್ಷ ಕೆ.ವಿ. ಸತೀಶ್ ತಿಳಿಸಿದ್ದಾರೆ.
ಹಿರಿಯ ನಟಿ ಭಾರ್ಗವಿ ನಾರಾಯಣನ್, ಪದ್ಮಶ್ರೀ ಪುರಸ್ಕೃತ ಕಲಾ ತಪಸ್ವಿ ಕೆ. ವಿಶ್ವನಾಥ್, ನಟ ಕೆ.ಎಸ್. ರವಿಕುಮಾರ್, ಹಿರಿಯ ನಟಿ ಕಾಂಚನ, ನಟರಾದ ರವಿಕಿರಣ್, ರಮೇಶ್ ಭಟ್, ಮೇನಕಾ ಸುರೇಶ್ ಕುಮಾರ್, ಕುಕ್ಕು ಪರಮೇಶ್ವರನ್, ಹರ್ಷಿಕ ಪೂರ್ಣಚ್ಚ, ಐಶ್ವರ್ಯ ರಾಜ್ ಭಕುನಿ, ಅವರು ಈ ಬಾರಿಯ ಡಿಎಸ್ ಮ್ಯಾಕ್ಸ್ ಕಲಾಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಡಿಎಸ್ ಮ್ಯಾಕ್ಸ್‌ನ 14ನೇ ವಾರ್ಷಿಕೋತ್ಸವ ಕಾರ್ಯಕ್ರಮ ಜೂ. 19 ರಂದು ಸಂಜೆ 3.30ಕ್ಕೆ ಅರಮನೆ ಮೈದಾನ ಶೀಷಮಹಲ್‌ನಲ್ಲಿ ನಡೆಯಲಿದ್ದು, ವಾರ್ಷಿಕೋತ್ಸವದಲ್ಲಿ ಈ ಎಲ್ಲಾ ಸಾಧಕರಿಗೆ ಡಿ.ಎಸ್. ಮ್ಯಾಕ್ಸ್ ಕಲಾಶ್ರೀ ನ್ಯಾಷನಲ್ ಪ್ರಶಸ್ತಿ ಪ್ರದಾನ ಮಾಡಲಾಗುವುದು ಪ್ರಶಸ್ತಿಗಳು 25 ಸಾವಿರ ರೂ. ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿರುತ್ತದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಾಳೆಹೊಸೂರು, ದಿಂಗಾಲೇಶ್ವರ ಮಠಾಧ್ಯಕ್ಷ ದಿಂಗಾಲೇಶ್ವರ ಮಹಾಸ್ವಾಮಿ ವಹಿಸಲಿದ್ದಾರೆ. ಸ್ವಾಮಿ ನಿರ್ಭಯಾನಂದ ಮಹಾರಾಜ್ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗೃಹಸಚಿವ ಡಾ. ಎಂ.ಬಿ ಪಾಟೀಲ್, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಸಚಿವರಾದ ಪುಟ್ಟರಾಜು, ಬಂಡೆಪ್ಪ ಕಾಶಂಪೂರ್, ಮಾಜಿ ಸಚಿವರಾದ ಅರವಿಂದ್ ಲಿಂಬಾವಳಿ, ಡಿ. ರಾಜುಗೌಡ, ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಡಿಎಸ್ ಮ್ಯಾಕ್ಸ್ ಸಂಸ್ಥೆಯೂ ಬೆಂಗಳೂರಿನ ಪ್ರಮುಖ ಬಿಲ್ಡರ್ ಗಳಲ್ಲಿ ಒಂದಾಗಿದ್ದು, ಬಹು ಮಹಡಿ ಕಟ್ಟಡಗಳನ್ನು ನಿರ್ಮಿಸಿ ಪ್ಲಾಟ್ ಗಳನ್ನು ಮಾರಾಟ ಮಾಡುತ್ತದೆ.
Discussion about this post