ದೇಶದೆಲ್ಲೆಡೆ ಜಾರಿಯಾಗಿರುವ ನೂತನ ಸಂಚಾರಿ ನಿಯಮ ಕಾನೂನು ಗಾಳಿಗೆ ತೂರಿ ರಸ್ತೆಗಿಳಿಯುತ್ತಿದ್ದ ಮಂದಿಗೆ ಸರಿಯಾಗಿಯೇ ಬಿಸಿ ಮುಟ್ಟಿಸಿದೆ. ದುಬಾರಿ ದಂಡಕ್ಕೆ ಜನ ಕಂಗಾಲಾಗಿದ್ದು, ಗಾಡಿ ತೆಗೆಯುವ ಮುನ್ನ ಸಾವಿರ ಸಲ ಯೋಚಿಸುವಂತಾಗಿದೆ.

ಈ ನಡುವೆ ದುಬಾರಿ ದಂಡ ತಪ್ಪಿಸಿಕೊಳ್ಳಲು ಕೆಲ ಬೈಕ್ ಸವಾರರು ದೇಸೀ ಉಪಾಯಕ್ಕೆ ಮೊರೆ ಹೋಗಿದ್ದಾರೆ. ಈ ದೇಶಿ ಐಡಿಯಾ ಕಂಡು ಟ್ರಾಫಿಕ್ ಪೊಲೀಸರೇ ಸುಸ್ತಾಗಿ ಹೋಗಿದ್ದಾರೆ.
ದೇಸೀ ಉಪಾಯದ ಹಾಸ್ಯಾತ್ಮಕ ವಿಡಿಯೋವೊಂದನ್ನು ಗುರುಗ್ರಾಮದ ಐಪಿಎಸ್ ಅಧಿಕಾರಿ ಪಂಕಜ್ ನೈನ್ ಅವರು ಶೇರ್ ಮಾಡಿಕೊಂಡಿದ್ದು, ವಿಡಿಯೋದಲ್ಲಿ ರಸ್ತೆಯಲ್ಲಿ ಸಂಚಾರಿ ಪೊಲೀಸರು ಬೈಕ್ ಗಳನ್ನು ನಿಲ್ಲಿಸಿ ಪರಿಶೀಲನೆ ನಡೆಸುತ್ತಿದ್ದರೆ, ಅತ್ತ ಪೊಲೀಸರ ಇರುವಿಕೆ ಕಂಡ ಬೈಕ್ ಸವಾರರು ಬೈಕ್ ನಿಂದ ಇಳಿದು ಬೈಕ್ ಅನ್ನು ಪೊಲೀಸರ ಮುಂದೆಯೇ ತಳ್ಳಿ ಕೊಂಡು ಹೋಗುತ್ತಿದ್ದಾರೆ.

ಸಂಚಾರಿ ನಿಯಮದ ಪ್ರಕಾರ ಹೆಲ್ಮೆಟ್ ಇಲ್ಲದೆ ಬೈಕ್ ಸವಾರಿ ಮಾಡುವುದು ಅಪರಾಧ. ಆದರೆ ಹೆಲ್ಮೆಟ್ ಇಲ್ಲದೇ ಬೈಕ್ ತಳ್ಳುವುದು ಅಪರಾಧವಲ್ಲ. ಇದೇ ಕಾರಣಕ್ಕೆ ಬೈಕ್ ಸವಾರರು ಸಾಮೂಹಿಕವಾಗಿ ಬೈಕ್ ಗಳನ್ನು ತಳ್ಳಿಕೊಂಡು ಬರುತ್ತಿದ್ದಾರೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆದರೆ ಹೆಲ್ಮೆಟ್ ಇಲ್ಲದ ಕಾರಣಕ್ಕೆ ಗಾಡಿ ತಳ್ಳಿಕೊಂಡು ಹೋದರೆ ಪೊಲೀಸರು ಏನೂ ಮಾಡುವಂತಿಲ್ಲ. ಆದರೆ ವಾಹನದ ದಾಖಲಾತಿ, ಲೈಸೆನ್ಸ್ ಹಾಗೂ ಇನ್ನಿತದ ದಾಖಲೆ ಪತ್ರಗಳು ಇಲ್ಲದೆ ಗಾಡಿ ತಳ್ಳಿ ಕೊಂಡು ಹೋದರೆ ಪೊಲೀಸರಿಗೆ ದಂಡ ವಿಧಿಸುವ ಅವಕಾಶವಿದೆ ಅನ್ನುವುದನ್ನು ಮರೆಯುವಂತಿಲ್ಲ.
Discussion about this post