ಈ ಸಾಮಾಜಿಕ ಜಾಲತಾಣದ ಚಾಲೆಂಜ್ ಗಳು ಒಳಿತು ಮಾಡುವುದಕ್ಕಿಂತ ಕೆಡುಕು ಮಾಡಿದ್ದು ಹೆಚ್ಚು.
ಜಗತ್ತಿನಾದ್ಯಂತ ಸದ್ದು ಮಾಡುತ್ತಿರುವ ಕಿಕಿ ಡ್ಯಾನ್ಸ್ ಚಾಲೆಂಜ್ ಪ್ರಾಣಕ್ಕೆ ಕಂಟಕವಾದ ಬೆನ್ನಲ್ಲೇ ಮತ್ತೊಂದು ಅಪಾಯಕಾರಿ ಚಾಲೆಂಜ್ ಸದ್ದು ಮಾಡಲಾರಂಭಿಸಿದೆ.
ಡ್ರ್ಯಾಗನ್ಸ್ ಬ್ರೀಥ್ ಹೆಸರಿನ ಈ ಚಾಲೆಂಜ್ ನೋಡುವುದಕ್ಕೆ ಮಜಾವಾಗಿದೆ. ಇದರ ಅಪಾಯವನ್ನು ಮಾತ್ರ ಊಹಿಸಲು ಅಸಾಧ್ಯ.
ಡ್ರ್ಯಾಗನ್ಸ್ ಬ್ರೀಥ್ ಎಂಬ ವಿಚಿತ್ರ ಚಾಲೆಂಜ್ ಸ್ವೀಕರಿಸಿದ ಮಂದಿ ತಮ್ಮ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಏನಿದು ಡ್ರ್ಯಾಗನ್ಸ್ ಬ್ರೀಥ್…?
ಸ್ವೀಟ್, ಮಿಠಾಯಿ ಮತ್ತಿತರ ತಿನಿಸುಗಳನ್ನು ದ್ರವರೂಪದ ಸಾರಜನಕದಲ್ಲಿ ಅದ್ದಿ ತಿಂದು, ನಂತರ ಈ ವೇಳೆ ಬರುವ ಹೊಗೆಯನ್ನು ಮೂಗು ಅಥವಾ ಬಾಯಿಯ ಮೂಲಕ ಹೊರಹಾಕಿದರೆ ಅದು ಡ್ರ್ಯಾಗನ್ಸ್ ಬ್ರೀಥ್ ಎನಿಸಿಕೊಳ್ಳುತ್ತದೆ.
ವಿದೇಶದಲ್ಲಿ ಪ್ರಾರಂಭವಾಗಿರುವ ಚಾಲೆಂಜ್ ಕರ್ನಾಟಕಕ್ಕೆ ಬರುವ ದಿನಗಳು ದೂರವಿಲ್ಲ. ಯಾಕೆಂದರೆ ನೈಟ್ರೋಜನ್ ನಲ್ಲಿ ಅದ್ದಿ ಆಹಾರ ಮಾರಾಟ ಮಾಡುವ ಮಳಿಗೆಗಳು ರಾಜ್ಯದಲ್ಲಿ ನೂರಾರಿವೆ. ಇದನ್ನು ತಿನ್ನುವ ಮಂದಿಯೂ ಸಾಕಷ್ಟಿದ್ದಾರೆ. ಆದರೆ ಅಪಾಯದ ಅರಿವು ಮಾತ್ರ ಯಾರಿಗೂ ಇಲ್ಲ.
ನೈಟ್ರೋಜನ್ನಲ್ಲಿ ಅದ್ದಿ ತೆಗೆದ ಆಹಾರ ಅತಿಯಾದ ತಂಪಿನಿಂದ ಕೂಡಿರುತ್ತವೆ. ನಾಲಗೆ ಮತ್ತು ಆಂತರಿಕ ಅಂಗಗಳನ್ನು ಕರಗಿಸುವಷ್ಟು ಪ್ರಬಲವಾಗಿರುತ್ತದೆ ಈ ನೈಟ್ರೋಜನ್ ಅನ್ನುವುದು ಹಲವಾರು ಮಂದಿಗೆ ಗೊತ್ತಿಲ್ಲ.
ಮುರಿದು ಬಿತ್ತಾ ರಶ್ಮಿಕಾ – ರಕ್ಷಿತ್ ಶೆಟ್ಟಿ ಎಂಗೇಜ್ಮೆಂಟ್….
ಈಗಾಗಲೇ ವಿದೇಶದಲ್ಲಿ ಚಾಲೆಂಜ್ ಸ್ವೀಕರಿಸಲು ಹೋದ ಹಲವಾರು ಮಂದಿ ಆಸ್ಪತ್ರೆಗೆ ಸೇರಿದ್ದಾರೆ.
ಡ್ರ್ಯಾಗನ್ಸ್ ಬ್ರೀಥ್ ಅಪಾಯ ಹೇಗೆ ಅಪಾಯ ಅನ್ನುವುದನ್ನು ತಿಳಿಸುವ ಎರಡು ವಿಡಿಯೋಗಳು ಇಲ್ಲಿದೆ.
Discussion about this post