Tuesday, March 9, 2021

ಚಂದನವನಕ್ಕೆ ಎಂಟ್ರಿ ಕೊಡಲಿದ್ದಾರೆ ಡಾ. ಸುಧಾಕರ್…ಇದು ವಿಶ್ವೇಶ್ವರ ಭಟ್ಟರ ಜೀವನದ ಘಟನೆಯೊಂದರ ಸ್ಟೋರಿ

Must read

- Advertisement -
- Advertisement -

ಬೆಂಗಳೂರು : ಸಿನಿಮಾ ರಂಗದಲ್ಲಿರುವ ಮಂದಿ ರಾಜಕೀಯ ಕ್ಷೇತ್ರಕ್ಕೆ ಬರುವುದು ಮಾಮೂಲಿ. ಆದರೆ ಆರೋಗ್ಯ ಸಚಿವ ಡಾ. ಸುಧಾಕರ್ ರಾಜಕೀಯದಲ್ಲಿ ಮಿಂಚಿದ ಬಳಿಕ ಇದೀಗ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ.

ಪತ್ರಕರ್ತ ವಿಶ್ವೇಶ್ವರ ಭಟ್ ಅವರ ಲೇಖನಗಳನ್ನು ಓದುವವರಾಗಿದ್ದಾರೆ ಕೊನೆಗೂ ತನುಜಾ ಪರೀಕ್ಷೆ ಬರೆದಳು, ನಾನು ಧನ್ಯ ಅನ್ನುವ ಲೇಖನ ಓದಿರುತ್ತೀರಿ.

ಅದು ಮೈ ರೋಮಾಂಚನಗೊಳಿಸುವ ಲೇಖನ, ಅದ್ಯಾವ ಪತ್ತೆದಾರಿ ಕಾದಂಬರಿಗೂ ಕಡಿಮೆ ಇಲ್ಲದ ನಿಜ ಘಟನೆಯಾಗಿತ್ತು. ಮುಂದೇನು ಅನ್ನುವ ಕುತೂಹಲವನ್ನು ತನುಜಾ ಮೆಡಿಕಲ್ ಸೀಟು ಪಡೆಯುವ ತನಕ ಕಾಯ್ದಿರಿಸಿತ್ತು.

ಇದೀಗ ಅದೇ ತನುಜಾ ಪರೀಕ್ಷೆ ಬರೆದ ಕಥೆ ಸಿನಿಮಾವಾಗುತ್ತಿದೆ. ಇದೇ ಸಿನಿಮಾದಲ್ಲಿ ಆರೋಗ್ಯ ಸಚಿವ ಡಾ. ಸುಧಾಕರ್ ಪಾತ್ರವೊಂದಕ್ಕೆ ಜೀವ ತುಂಬಲಿದ್ದಾರೆ.

ತನುಜಾ ಪರೀಕ್ಷೆ ಬರೆಯುವಲ್ಲಿ ಕೂಡಾ ಆರೋಗ್ಯ ಸಚಿವ ಪಾತ್ರ ಮಹತ್ತರವಾಗಿತ್ತು. ಪತ್ರಕರ್ತ ವಿಶ್ವೇಶ್ವರ ಭಟ್ ತನುಜಾಳ ಸಂಕಷ್ಟದ ಕಥೆಯನ್ನು ಗಮನಕ್ಕೆ ತರುತ್ತಿದ್ದಂತೆ ಜಾಗೃತರಾದ ಸಚಿವರು ಆಕೆ ಪರೀಕ್ಷೆ ಬರೆಯುವಂತೆ ಮಾಡುತ್ತಾರೆ.

ಕೇವಲ ಪರೀಕ್ಷೆ ಬರೆದಿದ್ರೆ ಪರವಾಗಿರಲಿಲ್ಲ. ಹತ್ತಾರ ಜನರ ಶ್ರಮದ ಫಲವಾಗಿ ದೂರದ ಶಿವಮೊಗ್ಗದಿಂದ 350 ಕಿಮೀ ದೂರ ಕ್ರಮಿಸಿ ಬಂದು ಬೆಂಗಳೂರಿನಲ್ಲಿ ಪರೀಕ್ಷೆ ಬರೆದು ರಾಜ್ಯವೇ ತಿರುಗಿ ನೋಡುವ ಫಲಿತಾಂಶ ಪಡೆಯುತ್ತಾಳೆ.

ಇನ್ನು ತಮ್ಮ ಸಿನಿಮಾ ಅಭಿನಯ ಕುರಿತಂತೆ ಮಾತನಾಡಿರುವ ಡಾಕ್ಟರ್ ಸುಧಾಕರ್ , ಹೌದು. ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಇದು ಕಮರ್ಷಿಯಲ್​ ಸಿನಿಮಾವಲ್ಲ ಅಂದಿದ್ದಾರೆ.

- Advertisement -
- Advertisement -
- Advertisement -

Latest article