ಹಣದ ಆಮಿಷಕ್ಕೆ ಒಳಗಾಗಿ ಅಕ್ರಮವಾಗಿ ಪಡಿತರ ಸಂಗ್ರಹಣೆ ಮಾಡಬಾರದು
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ವಿತರಿಸುವ ಆಹಾರ ಧಾನ್ಯಗಳನ್ನು ಹಣದ ಆಮಿಷಕ್ಕೆ ಒಳಗಾಗಿ ಮಾರಾಟ ಮಾಡಿದರೆ ಅಂತಹ ಪಡಿತರ ಚೀಟಿದಾರರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ರಿಯಾಜ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿನ ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಗೆ ೨೧ ಕೆ.ಜಿ ಸಾರವರ್ಧಿತ ಅಕ್ಕಿ ಮತ್ತು ೧೪ ಕೆ.ಜಿ. ರಾಗಿ ಹಾಗೂ ಆದ್ಯತಾ ಪಡಿತರ ಚೀಟಿ ಯಲ್ಲಿನ ಪ್ರತಿ ಸದಸ್ಯರಿಗೆ ೩ ಕೆ.ಜಿ. ಸಾರವರ್ಧಿತ ಅಕ್ಕಿ ಮತ್ತು ೨ ಕೆ.ಜಿ ರಾಗಿ ಆಹಾರ ಧಾನ್ಯವನ್ನು ಸರ್ಕಾರದಿಂದ ಪ್ರತಿ ತಿಂಗಳು ಉಚಿತವಾಗಿ ವಿತರಿಸಲಾಗುತಿದೆ.
ಜಿಲ್ಲೆಯಲ್ಲಿನ ಪಡಿತರ ಚೀಟಿದಾರರು ಆಹಾರ ಧಾನ್ಯಗಳನ್ನು ಯಾವುದೇ ಕಾರಣಕ್ಕೂ ಹಣದ ಆಮಿಷಕ್ಕೆ ಒಳಗಾಗಿ ಅಕ್ರಮವಾಗಿ ಸಂಗ್ರಹಣೆ ಮಾಡಬಾರದೆಂದು ಪ್ರಕಟಣೆ ಹೊರಡಿಸಿದ್ದಾರೆ.