ಮೊನ್ನೆ ಮೊನ್ನೆ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ದರ ಏರಿಸಿದ್ದ ಕೇಂದ್ರ ಸರ್ಕಾರ ಇಂದು ಗೃಹ ಬಳಕೆಯ ಸಿಲಿಂಡರ್ ದರವನ್ನು ಏರಿಸಿದೆ. ದಿನದಿಂದ ದಿನಕ್ಕೆ ಏರುತ್ತಿರುವ ಗ್ಯಾಸ್ ಸಿಲಿಂಡರ್ ದರ ನೋಡಿದರೆ ಕಟ್ಟಿಗೆ ಬಳಸಿ ಅಡುಗೆ ಮಾಡುವುದೇ ಬೆಟರ್.
ಇಂದು ಏರಿಕೆಯಾಗಿರುವ ದರದ ಪ್ರಕಾರ ಪ್ರತೀ ಸಿಲಿಂಡರ್‌ಗೆ 15 ರೂ ಬೆಲೆ ಏರಿಕೆ ಮಾಡಲಾಗಿದ್ದು, ಈ ಮೂಲಕ 2 ತಿಂಗಳ ಅವಧಿಯಲ್ಲಿ 4 ಸಲ ದರ ಏರಿದಂತಾಗಿದೆ. ಸಬ್ಸಿಡಿ ಇಲ್ಲದ 14.2 ಕೆ.ಜಿ. ಎಲ್‌ಪಿಜಿ ಸಿಲಿಂಡರ್ ಬೆಲೆ 15 ರೂ ಏರಿಕೆ ಮಾಡಿದ್ದು ದೆಹಲಿಯಲ್ಲಿ ಪ್ರತೀ ಸಿಲಿಂಡರ್ ಬೆಲೆ 884.50ರೂ ಇಂದ 899.50 ರೂಗೆ ಏರಿಕೆಯಾಗಿದೆ.
ಈಗಾಗಲೇ ಪೆಟ್ರೋಲ್ ಡೀಸೇಲ್ ದರ ಏರಿಕೆಯಿಂದ ಜನ ಕಂಗಲಾಗಿದ್ದಾರೆ, ಇನ್ನು ವಾಣಿಜ್ಯ ಸಿಲಿಂಡರ್ ದರ ಏರಿಕೆಯಿದ ಹೋಟೇಲ್ ಗಳಲ್ಲಿ ಫುಡ್ ಐಟಂ ದರ ವೂ ಏರಿಕೆಯಾಗಿದೆ. ಹೋಗ್ಲಿ ಮನೆಯಲ್ಲಾದರೂ ಹಬ್ಬದ ಅಡುಗೆ ಮಾಡಿ ತಿನ್ನುವುದಕ್ಕೂ ಗ್ಯಾಸ್ ಸಿಲಿಂಡರ್ ದರ ಏರಿಕೆ ಅಡ್ಡಿಯಾಗಿದೆ.
ಇನ್ನುಳಿದಂತೆ ದೆಹಲಿಯಲ್ಲಿ ಸಬ್ಸಿಡಿ ಇಲ್ಲದ 14.2 ಕೆ.ಜಿ. ಸಿಲಿಂಡರ್ ಬೆಲೆ 899.50 ರೂ, ಕೋಲ್ಕತ್ತಾದಲ್ಲಿ 911 ರೂ ಇಂದ 926 ರೂ , ಮುಂಬೈನಲ್ಲಿ 844.50 ರೂ ಇಂದ 899.50ರೂ , ಚೆನ್ನೈನಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 915.50ರೂಗೆ ಏರಿದೆ.
Discussion about this post