ನಾನು ಹುಟ್ಟಾ ಕಾಂಗ್ರೆಸ್ಸಿಗ. ಬೆಂಗಳೂರಿಗೆ ಬಂದ ತಕ್ಷಣ ಕಾಂಗ್ರೆಸ್ ದೇವಾಲಯಕ್ಕೆ ಹೋಗಿದ್ದೇನೆ. ಅಂದು ಅರಿವಿಲ್ಲದೆ ಜೆಡಿಎಸ್ ಧ್ವಜ ಹಿಡಿದಿದ್ದು ಎಂದು ತಮ್ಮ ವಿರುದ್ಧದ ಆರೋಪಕ್ಕೆ ಡಿ ಕೆ ಶಿವಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ.
ಜೆಡಿಎಸ್ ಧ್ವಜ ಹಿಡಿದಿರುವ ಕುರಿತಂತೆ ಅಸಮಾಧಾನ ಹೊರ ಹಾಕಿರುವ ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್ ನನಗೆ ಕನ್ನಡ ಮತ್ತು ಜೆಡಿಎಸ್ ಎರಡು ಬಾವುಟ ಕೊಟ್ಟಿದ್ದರು, ಎರಡು ಬಾವುಟ ಹಿಡಿದುಕೊಂಡಿದ್ದೆ. ಅದು ಯಾವ ಬಾವುಟ ಎಂದು ನಾನು ನೋಡಿರಲಿಲ್ಲ. ಸಿದ್ದರಾಮಯ್ಯನವರಿಗೆ ನನ್ನ ಮೇಲೆ ತುಂಬಾ ಪ್ರೀತಿ ಇದೆ. ಯಾರೋ ಅವರ ಹಾದಿ ತಪ್ಪಿಸುತ್ತಿದ್ದಾರೆ. ಹೀಗಾಗಿ ಅವರು ಅಸಮಾಧಾನದ ಮಾತುಗಳನ್ನಾಡಿದ್ದಾರೆ ಎಂದವರು ಹೇಳಿದ್ದಾರೆ.

ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರಿಗೆ ಬಂದಿಳಿದ ಡಿ ಕೆ ಶಿವಕುಮಾರ್ ಅವರಿಗೆ ಅದ್ದೂರಿ ಸ್ವಾಗತ ಸಿಕ್ಕಿತ್ತು. ಆ ಸಂದರ್ಭದಲ್ಲಿ ಅವರು ಜೆಡಿಎಸ್ ಧ್ವಜ ಹಿಡಿದ ವೀಡಿಯೊ ವೈರಲ್ ಆಗಿತ್ತು. ಈ ಕುರಿತು ಬಹಿರಂಗವಾಗಿ ಅಸಮಧಾನ ಹೊರ ಹಾಕಿದ್ದ ಸಿದ್ದರಾಮಯ್ಯ, ಡಿಕೆಶಿ ಅವರಿಗೆ ಜೆಡಿಎಸ್ ಬಾವುಟ ಹಿಡಿಯುವ ಅಗ್ಯತವೇನಿತ್ತು ಎಂದು ಪ್ರಶ್ನಿಸಿದ್ದರು.
Discussion about this post