Tuesday, March 9, 2021

ರಾಜ ಗುರೂಜಿ ಭವಿಷ್ಯ :ಮಾತಾಡೋ ಶೈಲಿ,ಬಾಡಿಸ್ಟೈಲ್ ಬದಲಾಯಿಸಿದ್ರೆ ಡಿಕೆಶಿ ಸಿಎಂ ಆಗಲು ಆರ್ಹರಂತೆ…

Must read

- Advertisement -
- Advertisement -

ದೃಢವಾದ ಭಕ್ತಿಯಿಂದ ದತ್ತಾತ್ರೇಯನಿಗೆ ಶರಣು ಹೋದರೆ ಡಿಕೆಶಿಗೆ ಬಯಸಿದ ಪದವಿ ಸಿಗುತ್ತದೆ. ಒಂದು ವೇಳೆ ದತ್ತಾತ್ರೇಯನಿಂದ ದೂರ ಹೋದ್ರೆ ಪದವಿ ಸಿಗಲ್ಲ ಎಂದು ರಾಜ ಗುರು ಎಂದೇ ಪ್ರಸಿದ್ಧರಾಗಿರುವ ದ್ವಾರಕನಾಥ್ ಎಚ್ಚರಿಕೆ ನೀಡಿದ್ದಾರೆ.

 ಡಿಕೆಶಿವಕುಮಾರ್ ಅವರನ್ನ ಚಿಕ್ಕ ವಯಸ್ಸಿನಿಂದ ತಿದ್ದಿದವನು ನಾನೇ. ಹೀಗಾಗಿ ಒಳ್ಳೆಯ ಮಾರ್ಗದಲ್ಲಿ ನಡೆಯುತ್ತಿರುವ ಡಿಕೆ ಶಿವಕುಮಾರ್, ಇನ್ನು ತುಂಬಾ ಮೆಚ್ಯೂರೆಡ್ ಆಗಿ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು.ಮಾತನಾಡುವ ಹಾಗೂ, ಬಾಡಿಸ್ಟೈಲ್ ಬದಲಾಯಿಸಿಕೊಂಡರೆ ಡಿ.ಕೆ.ಶಿ ಮುಖ್ಯಮಂತ್ರಿ ಆಗುವ ಅರ್ಹತೆ ಹೊಂದುತ್ತಾರೆ. ಎಂದು ರಾಜ ಗುರು ಹೇಳಿದ್ದಾರೆ.

ಇದೇ ವೇಳೆ ಸಮ್ಮಿಶ್ರ ಸರ್ಕಾರಕುರಿತಂತೆ ಭವಿಷ್ಯ ನುಡಿದಿರುವ ಅವರು ಸಮ್ಮಿಶ್ರ ಸರ್ಕಾರದಲ್ಲಿ ಒಬ್ಬರಿಗೊಬ್ಬರು ಸಹಕಾರ ನೀಡಬೇಕು. ಸಹಕಾರ ಕೊಡಬೇಕು. ಸರ್ಕಾರ ಮಾರ್ಚ್ 27ರವರೆಗೆ ಸುಸೂತ್ರವಾಗಿ ನಡೆದರೆ ಮಾತ್ರ ಮೈತ್ರಿಯ ಕಾರ್ಯಸಾಧನೆ ಆಗಲಿದೆ. ಹೀಗಾಗಿ ಶಾಂತಿ ಮುಖ್ಯ ಎಂದು ಪರಿಹಾರ ಸೂತ್ರವನ್ನು ಕೂಡಾಕೊಟ್ಟಿದ್ದಾರೆ.

ಸಿಎಂ ಕುಮಾರಸ್ವಾಮಿ ಆರೋಗ್ಯ ಸುಧಾರಣೆಗಾಗಿ ಸನ್ನತಿಯ ಚಂದ್ರಲಾಪುರ ದೇವಿಯ ದರ್ಶನ ಮಾಡಬೇಕು. ಚಂದ್ರಲಾಪುರ ದೇವಿ ಮಾತ್ರ ಅವರಿಗೆ ಆರೋಗ್ಯ ಭಾಗ್ಯ ಸಿಗಲಿದೆ ಎಂದು ರಾಜ ಗುರು ಖಾಸಗಿ ವಾಹಿನಿಯೊಂದಕ್ಕೆ ಕೊಟ್ಟ ಸಂದರ್ಶನದಲ್ಲಿ ಹೇಳಿದ್ದಾರೆ.

https://www.youtube.com/watch?v=rz7zgAK-oFk
- Advertisement -
- Advertisement -
- Advertisement -

Latest article