- Advertisement -
- Advertisement -
ಚಿತ್ರದುರ್ಗ : ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ರಾಜಕೀಯ ಶೀಘ್ರದಲ್ಲೇ ಅಂತ್ಯ ಕಾಣಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು ಡಿಕೆಶಿ ಜೈಲಿನಿಂದ ಬಂದಾಗ ಮೆರವಣಿಗೆ ಮೂಲಕ ಬಂದಿದ್ದರು. ಇದೀಗ ಮತ್ತೆ ಅಲ್ಲಿಗೆ ಹೋಗ್ತಾರೆ ಎಂದು ಹೇಳಿದರು.

ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ ನಳಿನ್ ಅಧಿಕಾರ ಇಲ್ಲದೇ ಹೋದಾಗ ಕಾಂಗ್ರೆಸ್ ಬೆಂಕಿ ಇಡುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದಾಗ ಅಶಾಂತಿ, ಗಲಭೆ ಸೃಷ್ಟಿಸಿದೆ. ಈ ಹಿಂದೆ ಸಿಎಎ ಜಾರಿ ಸಂದರ್ಭದಲ್ಲೂ ಕಾಂಗ್ರೆಸ್ ಇದೇ ಕೃತ್ಯ ಎಸಗಿತತು. ಆಗ ಪ್ರತಿಭಟನಕಾರರು ಪಿಸ್ತೂಲ್ ಹಿಡಿದು ತಿರುಗಿದ್ದರು. ನಿನ್ನೆ ತಲವಾರ್ ಹಿಡಿದಿದ್ದಾರೆ ಎಂದು ದೂರಿದರು.
- Advertisement -