ಬೆಂಗಳೂರು : ಜೀ ಕನ್ನಡ ವಾಹಿನಿಯಲ್ಲಿ ಇದೇ 19 ರಿಂದ ಪ್ರಸಾರ ಪ್ರಾರಂಭಿಸಿಬೇಕಾಗಿದ್ದ ಹೊಸ ಧಾರವಾಹಿ ‘ಹಿಟ್ಲರ್ ಕಲ್ಯಾಣ’ ಪ್ರಸಾರ ದಿನಾಂಕವನ್ನು ಮುಂದೂಡಲಾಗಿದೆ. ಧಾರವಾಹಿಯ ನಾಯಕಿ ನಟಿ ಮಲೈಕಾ ಅವರು ಅಪಘಾತಕ್ಕೆ ಗುರಿಯಾಗಿರುವ ಕಾರಣ ಧಾರವಾಹಿ ಪ್ರಸಾರ ಮುಂದೂಡಲಾಗಿದೆ ಅನ್ನಲಾಗಿದೆ.
ಶೂಟಿಂಗ್ ಸ್ಥಳದಲ್ಲೇ ಈ ಅಪಘಾತ ಸಂಭವಿಸಿದೆ ಅನ್ನುವ ಮಾಹಿತಿ ಲಭಿಸಿದ್ದು, ಈ ಬಗ್ಗೆ ವಾಹಿನಿಯಾಗಲಿ, ಧಾರವಾಹಿ ನಿರ್ಮಾಣ ಸಂಸ್ಥೆಯಾಗಲಿ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಮೂಲಗಳ ಪ್ರಕಾರ ನಾಯಕಿ ನಟಿ ದೃಶ್ಯವೊಂದರ ಚಿತ್ರೀಕರಣ ಸಂದರ್ಭದಲ್ಲಿ ಸ್ಕೂಟಿಯಿಂದ ಬಿದ್ದು ತಲೆಗೆ ಏಟು ಮಾಡಿಕೊಂಡಿದ್ದಾರೆ ಅನ್ನಲಾಗಿದೆ. ಜೊತೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಅಂದ ಹಾಗೇ ಖ್ಯಾತ ನಟ ದಿಲೀಪ್ ರಾಜ್ ನಾಯಕರಾಗಿ ಈ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದು ಜೊತೆಗೆ ನಿರ್ಮಾಪಕ ಜವಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ. ಹಿಟ್ಲರ್ ಕಲ್ಯಾಣ ತೆಲುಗಿನ Hitle Gari Pellam ನ ರಿಮೇಕ್ ಆಗಿತ್ತು, ಕನ್ನಡದ ನೇಟಿವಿಟಿಗೆ ತಕ್ಕಂತೆ ನಿರ್ಮಿಸಲಾಗುತ್ತಿದೆ. ತೆಲುಗಿಗೆ ಹಿಂದಿಯ Guddan Tumse Na Ho Payega ಧಾರಾವಾಹಿಯನ್ನು ರಿಮೇಕ್ ಮೂಲಕ ತರಲಾಗಿತ್ತು.
ಇನ್ನು ದಿಲೀಪ್ ಈಗಾಗಲೇ ಜೀ ಕನ್ನಡ ವಾಹಿನಿಗಾಗಿ ಪಾು ಧಾರಾವಾಹಿಯನ್ನು ನಿರ್ಮಿಸುತ್ತಿದ್ದು, TRP ಪಟ್ಟಿಯಲ್ಲಿ ಪ್ರತೀ ವಾರ ಪಾರು ಸದ್ದು ಮಾಡುತ್ತಿದೆ. ಹೀಗಾಗಿ ಹಿಟ್ಲರ್ ಕಲ್ಯಾಣ ಬಗ್ಗೆಯೂ ಸಾಕಷ್ಟು ನಿರೀಕ್ಷೆ ಇದೆ.
Discussion about this post